ಉ.ಕ ಸುದ್ದಿಜಾಲ ಬಾಗಲಕೋಟೆ :

ಹಿರೇಮುಚ್ಚಳಗುಡ್ಡದಲ್ಲಿ ಮೂರು ಮಕ್ಕಳ ಕೊಂದು ತಾಯಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣ. ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ. ಹಿರೇಮಚ್ಚಳಗುಡ್ಡದಲ್ಲಿ ತಾಯಿ ಮೂರು ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳು ಮೃತಪಟ್ಟು, ತಾಯಿಯನ್ನ ಸೀರಿಯಸ್ ಆಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಕಾರಣ ಗಂಡ ಹೆಂಡತಿ ಜಗಳ ಅಥವಾ ಅತ್ತೆ ಮಾವ ಕಿರುಕಳ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಸ್ಥಳದಲ್ಲೇ ಸಿಪಿಐ & ಪಿಎಸ್ಐ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅತ್ತೆ ಮಾವನ ಕಿರುಕಳ ಬಗ್ಗೆ ಹೆಚ್ಚು ಆರೋಪ ಇದೆ.

ಆದ್ರೆ ತಾಯಿ ಕಂಡಿಷನ್ ನೋಡಿಕೊಂಡು, ವೈದ್ಯರ ಸಲಹೆ ಮೇರೆಗೆ ತಾಯಿ ಸ್ಟೇಟಮೆಂಟ್ ಪಡೆಯುತ್ತೇವೆ. ನಾವು & ಎಕ್ಸಿಕ್ಯುಟಿವ್ ಮೆಜಿಸ್ಟ್ರೇಟ್ ಕಡೆಯಿಂದ ರೆಕಾರ್ಡ್ ಮಾಡಿ ಮಾಹಿತಿ ಪಡೆಯುತ್ತೇವೆ‌ ಮದ್ಯಾಹ್ನ 1.30 ಗಂಟೆಯೊಳಗೆ ಘಟನೆ ‌ನಡೆದಿದೆ‌.

ಗಂಡ ಮನೆಗೆ ಬಂದು ನೋಡಿದಾಗ ಘಟನೆ ಗೊತ್ತಾಗಿದೆ ಅಂತಿದ್ದಾರೆ. ಒಟ್ಟಾರೆ ಸಂಪೂರ್ಣ ತನಿಖೆ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ. ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ.