ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಅರ್ಚಕ, ಇಬ್ಬರು ದುರಮರಣ! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ ಬಳಿಯ ಶಿವನ ಮೂರ್ತಿ ಎದುರು ಘಟನೆ. ಗೂಡ್ಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತ.

ಅಪಘಾತದಲ್ಲಿ ಬೈಕ್ ಸವಾರ ಹಾಗೂ ಗೂಡ್ಸ್ ವಾಹನದ ಚಾಲಕ ಸ್ಥಳದಲ್ಲೇ ಸಾವು. ರಾಮದುರ್ಗ ಪಟ್ಟಣದ ನಿವಾಸಿ, ಶಿವಲಿಂಗ ದೇವಸ್ಥಾನದ ಮುಖ್ಯ ಅರ್ಚಕ ವಿಜಯಕುಮಾರ್ ಘೋಡಬೋಲೆ (55) ಸಾವು. ಕಲಬುರಗಿ ಮೂಲದ ಗೂಡ್ಸ್ ವಾಹನದ ಚಾಲಕ ಅನಿಲ್ ರಮೇಶ ಬಿರಾದಾರ (23) ಸಾವು.

ಹಾವೇರಿಯಿಂದ ರಾಮದುರ್ಗಕ್ಕೆ ಬರ್ತಿದ್ದ ಗೂಡ್ಸ್ ವಾಹನ ಚಾಲಕ ಅನಿಲ್. ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ಹೊರಟ್ಟಿದ್ದ ಅರ್ಚಕ ಸ್ಕೂಟಿಗೆ ಡಿಕ್ಕಿ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸಾವು. ಮತ್ತೊಂದೆಡೆ ಗೂಡ್ಸ್ ವಾಹನ ಪಲ್ಟಿ ಹಿನ್ನೆಲೆ ವಾಹನ ಚಾಲಕ ಕೂಡ ಸಾವು, ನಾಲ್ವರಿಗೆ ಗಾಯ.

ಗಾಯಗೊಂಡವರು ಸ್ಥಳೀಯ ಆಸ್ಪತ್ರೆಗೆ ರವಾನೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಭೇಟಿ, ಪರಿಶೀಲನೆ. ರಾಮದುರ್ಗ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.