ಉ.ಕ ಸುದ್ದಿಜಾಲ ಬೆಳಗಾವಿ :
ಬೆಂಗಳೂರು ಲೇಡಿ ಜೊತೆಗೆ ಮಹಾರಾಷ್ಟ್ರ ಯುವಕನ ಲವ್ವಿಡವ್ವಿ, ಪ್ರಿಯಕರನ ಜೊತೆಗೂಡಿ ಹೆತ್ತ ಮಗನನ್ನೇ ಕೊಲೆಗೈದ ಪಾಪಿ ತಾಯಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಗನನ್ನೆ ಮರ್ಡರ್ ಮಾಡಿಸಿದ ತಾಯಿ ಬೆಳಗಾವಿಯಲ್ಲಿ ಬಯಲಾಯಿತು ತಾಯಿಯ ರಾಕ್ಷಸಿ ಕೃತ್ಯ.
ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ವಿಜಯ್ ನಾರಾಯಣ (24) ಬರ್ಬರ ಹತ್ಯೆ, ವಿಜಯ್ ನಾರಾಯಣ್ (24) ಬೆಂಗಳೂರು ಆರ್.ಟಿ ನಗರ ನಿವಾಸಿ ರಾಜ್ಯೋತ್ಸವ ದಿನವೇ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಸಿಕ್ಕಿತ್ತು ಯುವಕನ ಮೃತದೇಹ. ಯುವಕನ ಮೊಬೈಲ್ ಕಾಲ್ ಡಿಟೇಲ್ಸ್ ಆಧರಿಸಿ ಕೊಲೆ ಪ್ರಕರಣ ಪತ್ತೆ
ಕೊಲೆ ಕೇಸ್ ಪತ್ತೆ ಹೆಚ್ಚಿದ ಮಾಳಮಾರುತಿ ಠಾಣೆ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಮಗನ ಹತ್ಯೆ ಹಿಂದೆ ತಾಯಿ, ಆತನ ಪ್ರಿಯಕರ ಮತ್ತು ಸ್ನೇಹಿತರ ಪಾತ್ರ ಬಯಲು
ಆಚಾನಕ್ ಆಗಿ ಭೇಟಿ ಆದ ಮಹಾರಾಷ್ಟ್ರ ಯುವಕನ ಜೊತೆಗೆ ಲೇಡಿ ಸಲುಗೆ, ಬೆಂಗಳೂರು ಮೂಲದ ಮೀನಾ ಹಾಗೂ ಮಹಾರಾಷ್ಟ್ರದ ಯುವಕ ರಾಕೇಶ ಮಧ್ಯೆ ಲವ್ ಬ್ಯೂಟಿ ಪಾರ್ಲರ್‌ನಲ್ಲಿ ಮ್ಯಾನೇಜರ್ ಆಗಿದ್ದ ಮೀನಾ ನಾರಾಯಣ್, ಈ ವೇಳೆ ಪ್ರಿಯಕರ ರಾಕೇಶನನ್ನೇ ತನ್ನ ಕಾರು ಚಾಲಕನಾಗಿರಿಸಿಕೊಂಡಿದ್ದ ಮೀನಾ.
ಇಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಮೀನಾ ಪುತ್ರ ವಿಜಯ್ ಕೆಲ ದಿನಗಳಿಂದ ವಿಜಯ್‌ಗೆ ಗೊತ್ತಾಗದ ಹಾಗೇ ಅನೈತಿಕ ಸಂಬಂಧ ಮುಂದುವರೆಸಿದ್ದ ಜೋಡಿ. ಅನೈತಿಕ ಸಂಬಂಧಕ್ಕೆ ವಿಜಯ್ ಅಡ್ಡಿ ಆಗ್ತಾನೆಂದು ಕೊಲೆಗೆ ಪ್ಲ್ಯಾನ್ ಮಾಡಿದ ಜೋಡಿ
ರಾಜ್ಯೋತ್ಸವ ನೋಡಿ ಬರೋಣ ಎಂದು ವಿಜಯ್‌ನನ್ನು ಬೆಳಗಾವಿಗೆ ಕರೆರಂದಿದ್ದ ಹಂತಕರು ತನ್ನೂರಿನ ನಾಲ್ವರು ಸ್ನೇಹಿತರ ಜೊತೆಗೂಡಿ ವಿಜಯ್ ಹತ್ಯೆಗೈದ ಮೀನಾ ಹಾಗೂ ರಾಕೇಶ್ ಮೀನಾ, ರಾಕೇಶ ಮತ್ತು ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ, ಏಕನಾಥ ಸದ್ಯ ಅರೆಸ್ಟ್ ಆಗಿದ್ದಾರೆ.
