ಉ.ಕ ಸುದ್ದಿಜಾಲ ಬೆಳಗಾವಿ :
ಮಸೀದಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ. ಎರಡು ವರ್ಷದ ನಂತರ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಮೂಲಕ ಹೊರ ಬಂದ ಪಾಪಿಯ ಹೀನ ಕೃತ್ಯ. ಮಗಳಿಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಪುನೀತ್ ಗೆ ಕರೆ ಮಾಡಿದ್ದ ಅಪ್ರಾಪ್ತ ಬಾಲಕಿ ತಂದೆ.
ಬಾಲಕಿಯ ತಂದೆಯ ಜೊತೆ ಮಾತನಾಡಿ ತಮ್ಮಎಕ್ಸ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಪುನೀತ್ ಕೆರೆಹಳ್ಳಿ. ಎಕ್ಸ ಖಾತೆಯಲ್ಲಿ ಪೋಸ್ಟ್ ಮಾಡಿ ನ್ಯಾಯ ಒದಗಿಸಿಕೊಡಿ ಎಂದಿದ್ದ ಪುನೀತ್ ಕೆರೆಹಳ್ಳಿ. ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದ ಪುನೀತ ಕೆರೆಹಳ್ಳಿ.
ಎಕ್ಸ ಖಾತೆಯ ವಿಡಿಯೋ ಸಾಕ್ಷಿಯನ್ನಾಗಿರಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು. ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿ ಒಂದರಲ್ಲಿ ಅತ್ಯಾಚಾರ.
ಅತ್ಯಾಚಾರದ ವಿಡಿಯೋ ಮಸೀದಿಯೊಳಗಿನ ಸಿಸಿಟಿವಿಯಲ್ಲಿ ಸೆರೆ. ಸಿಸಿಟಿವಿ ವಿಡಿಯೋ ಸಮೇತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಪುನೀತ್ ಕರೆಹಳ್ಳಿ. ಪುನೀತ್ ಪೋಸ್ಟ್ ಮಾಡಿದ್ದ ವಿಡಿಯೋ ಸಾಕ್ಷಿಯಾಗಿಟ್ಟುಕೊಂಡಿದ್ದ ಪೊಲೀಸರು. ಅಪ್ರಾಪ್ತೆಯ ಭವಿಷ್ಯಕ್ಕಾಗಿ ಹಿಂಜರಿದು ದೂರು ನೀಡದ ಕುಟುಂಬಸ್ಥರು.
ಆದರೂ ಸಹ ತಂಡ ರಚಿಸಿ ಆರೋಪಿತನ್ನು ಬಂಧಿಸಿರುವ ಪೊಲೀಸರು. ಆರೋಪಿ ಬಂಧಿಸಿದ ನಂತರ ಸಿಡಿಪಿಒ ಮುಖಾಂತದ ದೂರು ಪಡೆದುಕೊಂಡ ಪೊಲೀಸರು. ಮಸೀದಿಯಲ್ಲಿ ಪುಟ್ಟ ಮಗುವಿನ ಮೇಲೆ ಎರಗಿದ್ದ ಕಾಮಿ ಅಂದರ್.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕನನ್ನು ಬಂಧಿಸಿದ್ದಾಗಿ ಎಸ್ಪಿ ಮಾಹಿತಿ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಮಸೀದಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ
