ಉ.ಕ ಸುದ್ದಿಜಾಲ ಬೆಳಗಾವಿ, ಬಾಗಲಕೋಟೆ‌ :

ನಿಲ್ಲದ ಮಾವಾ ಮಾರಾಟ ದಂಧೆ ಪೊಲೀಸರಿಗೆ ತಲೆನೋವಾದ ಮಾವಾ ದಂಗೆಕೋರರು ತಂಬಾಕು, ಗುಟ್ಕಾ ಇವು ಬಾಯಿ ಕ್ಯಾನ್ಸರ್ ಗೆ ಮೂಲವಾಗುವಂತಹ ಮಾದಕವಸ್ತುಗಳು.ಆದರೆ ಈ ಮಧ್ಯೆ ಅದೊಂದು ಜಿಲ್ಲೆಯಲ್ಲಿ ಮಾವಾ ಎಂಬ ಹೆಸರಿನ ಮಾದಕಪದಾರ್ಥದ ಹಾವಳಿ ಜೋರಾಗಿದೆ.

ಮಾವಾ (ತಂಬಾಕು ಅಡಿಕೆ ಹಾಗೂ ಕೆಲ ರಸಾಯನಿಕ ಪದಾರ್ಥ ಮಿಶ್ರಣದ ಮಾದಕವಸ್ತು) ತಿಂದು ಅನೇಕರು ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ.ಇದಕ್ಕೆ ಬ್ರೆಕ್ ಹಾಕುವ ಪ್ರಯತ್ನ ಒಂದು ಕಡೆ ನಡೆದರೂ ಇದರ ಹಾವಳಿ ಮಾತ್ರ ಎಗ್ಗಿಲ್ಲದೆ ಮುಂದುವರೆದಿದೆ.

ಮಾವಾ ಇದರ ಹೆಸರನ್ನು ಕೇಳಿದರೆ ಒಂದು ಕ್ಷಣ ಇದೇನಪ್ಪಾ ಎಂತಹ ಹೆಸರು ಎಂದು ತಿರುಗಿ ನೋಡುತ್ತಾರೆ. ಅಷ್ಟಕ್ಕೂ ಮಾವಾ ಅಂದರೆ ಮಾದಕ ಪದಾರ್ಥ ಎಂದು ಎಲ್ಲರಿಗೂ ಗೊತ್ತಿಲ್ಲ ಬಿಡಿ, ಕೆಲವರು ಮಾವಾ ಎಂದರೆ ಅಳಿಯ ಮಾವ ಸಂಬಂಧದ ಮಾವ ಎಂದುಕೊಳ್ಳುತ್ತಾರೆ. ಆದರೆ ಇದು ಆ ಮಾವಾ ಅಲ್ಲ ಈ ಮಾವಾ ಮಾದಕವಸ್ತು (ತಂಬಾಕು ಅಡಿಕೆ ರಸಾಯನಿಕ ಮಿಶ್ರಿತ ಮಾದಕಪದಾರ್ಥ) ಇದರ ಹಾವಳಿ ಬಾಗಲಕೋಟೆ ಬೆಳಗಾವಿ ಜಿಲ್ಲೆಯಲ್ಲಿ ಬಹಳ ದಿನದಿಂದಲೂ ಇದೆ.

ಆದರೆ ಈಗ ಅದು ಇನ್ನು ಹೆಚ್ಚಾಗುತ್ತಾ ಸಾಗುತ್ತಿದೆ. ಬಾಗಲಕೋಟೆ ಹಾಗೂ ಜಮಖಂಡಿ ರಬಕವಿ ಬನಹಟ್ಟಿ ಬೆಳಗಾವಿ ಜಿಲ್ಲೆಯ ಕಾಗವಾಡ, ಅಥಣಿ ಅಥಣಿ ಭಾಗದಲ್ಲಿ ಇದರ ಮಾರಾಟ ಹಾಗೂ ಸೇವನೆ ಜೋರಾಗಿದೆ. ಇದಕ್ಕೆ ಯುವಕರು ಸೇರಿದಂತೆ ಎಲ್ಲ ವಯೋಮಾನದ ಜನರು ಬಲಿಯಾಗಿ ಬಾಯಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.

ಆರೋಗ್ಯ ಇಲಾಖೆಯಿಂದ ಸಾಕಷ್ಟು ಜಾಗೃತಿ ಕೂಡ ಮೂಡಿಸುತ್ತಿದ್ದರೂ ಇದರ ವ್ಯಸನಕ್ಕೆ ಒಳಗಾದವರು ಹೊರ ಬರುತ್ತಿಲ್ಲ.ಆದರೂ ನಿರಂತರ ಜಾಗೃತಿ ಮೂಡಿಸುತ್ತಿರುವ ವೈದ್ಯರು ಇದು ಬಾಯಿ ಕ್ಯಾನ್ಸರ್ ಹಾಗೂ ಹೊಟ್ಟೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಆದ್ದರಿಂದ ಮಾವಾ ಸೇವನೆಯಿಂದ ಎಲ್ಲರೂ ದೂರವಿರಿ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಬಾಗಲಕೋಟೆ ನಗರದ ಭಾಗದಲ್ಲಿ ಹಸಿ ಮಾವಾ ಮಾರಾಟ ನಡೆಯುತ್ತಿದ್ದರೆ, ಜಮಖಂಡಿ, ರಬಕವಿ ಬನಹಟ್ಟಿ ಭಾಗದಲ್ಲಿ ಒಣ ಮಾವಾ (ಪೌಡರ್ ಮಾದರಿ) ಮಾರಾಟ ಹಾಗೂ ಸೇವನೆ ಕೂಡ ಜಾಸ್ತಿಯಾಗಿದೆ. ಇವುಗಳನ್ನು ತಯಾರಿಸುವ ಪ್ಯಾಕ್ಟರಿಗಳು ಕೂಡ ಆರಂಭವಾಗಿದ್ದು ದುರಂತ.

ಒಂದು ಸಣ್ಣ ಪ್ಯಾಕೆಟ್ ಗೆ 15-20 ರೂನಂತೆ ಇವುಗಳನ್ನು ಮಾರಾಟ ಮಾಡಲಾಗುತ್ತದೆ.ಇದನ್ನು ನಿರಂತರವಾಗಿ ದವಡೆಯಲ್ಲಿ ಇಟ್ಟುಕೊಳ್ಳುವ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.ಈಗಾಗಲೇ ಈ ಬಗ್ಗೆ ಜಿಲ್ಲಾಡಳಿತ ಕೂಡ ಗಂಭೀರವಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಜಮಖಂಡಿಯಲ್ಲಿ ಎರಡು ಕೇಸ್, ರಬಕವಿಬನಹಟ್ಟಿಯಲ್ಲಿ ನಾಲ್ಕು ಕೇಸ್ ಹಾಕಲಾಗಿದೆ,

ನಾಲ್ಕು ಪ್ಯಾಕ್ಟರಿಗಳನ್ನು ಸೀಜ್ ಮಾಡಲಾಗಿದೆ. ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾವಾ ಬಗ್ಗೆ ಎಲ್ಲ ಕಡೆ ಹೆಚ್ಚಿನ ಮಾಹಿತಿ ಕಲೆ ಹಾಕಿ ದಾಳಿ ಮಾಡುತ್ತಿದ್ದೇವೆ. ಜಿಲ್ಲಾದ್ಯಂತ ಜುಲೈ ಅಂತ್ಯದವರೆಗೆ ಒಟ್ಟು 70 ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ತಿಂಗಳು 34 ಹೆಚ್ಚುವರಿ ಕೇಸ್ ಮಾಡಲಾಗಿದೆ.

ಮಷಿನ್ ಗಳನ್ನು ಜಪ್ತಿ ಮಾಡಲಾಗಿದೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾವಾ ಮಾರಾಟ ಹಾಗೂ ತಯಾರಿಕೆ ಕಂಡು ಬಂದಲ್ಲಿ ಎಸ್ ಪಿ ಕಚೇರಿಗೆ ನೇರ ದೂರು ನೀಡಿ ಎಂದು ಎಸ್ ಪಿ ಸಾರ್ವಜನಿಕರಿಗೆ ಕರೆ ನೀಡುತ್ತಿದ್ದಾರೆ. ಇನ್ನು ಮಾವಾ ತಡೆಗಟ್ಟಲು ಈಗಾಗಲೇ ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಮಾವಾ ಜನರ ಬಾಯಿ ಕ್ಯಾನ್ಸರ್ ಗೆ ಕಾರಣವಾಗುತ್ತಿದ್ದು ಯುವಕರು ಹೆಚ್ಚಾಗಿ ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇನ್ನು ಪರಿಣಾಮಕಾರಿಯಾಗಿ ಇದರ ಮೇಲೆ ಕ್ರಮ ಕೈಗೊಂಡು ಇದಕ್ಕೆ ಶಾಸ್ವತ ಕಡಿವಾಣ ಹಾಕಬೇಕಿದೆ.