ಉ.ಕ ಸುದ್ದಿಜಾಲ ಕಾಗವಾಡ :
ಕುಂದಾನಗರಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೊಂದಲದ ಗುಡಾಗಿದೆ.ಜಾರಕಿಹೊಳಿ v/s ಕತ್ತಿ ಕುಟುಂಬದ ಮದ್ಯ ಬಿಗ್ ಫೈಟ್ ಶುರುವಾಗಿದೆ. ಇವುಗಳ ಮದ್ಯ ಶಾಸಕ ರಾಜು ಕಾಗೆ ಹೊಸ ಬಾಂಬ್ ಸಿಡಿಸಿದ್ದು ಸಂಚಲನ ಹುಟ್ಟುಹಾಕಿದೆ.
ಅಥಣಿ ತಾಲೂಕಿನ ಚಮಕೇರಿ-ಬೇಡರಹಟ್ಟಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿ ಮಾತಾಡಿದ ಅವರು.ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ಸ್ಪರ್ದಿಸುವುದು ಫಿಕ್ಸ್, ಗೆಲ್ಲುವು ಕೂಡ ನಿಶ್ಚಿತ ಎಂದು ಹೇಳಿದ್ದಾರೆ.
ಈ ಒಂದು ಮಾತು ಕುತೂಹಲ ಮೂಡಿಸಿದ್ದು ರಾಜು ಕಾಗೆ ಯಾರ್ ಪರ ಬ್ಯಾಟ್ ಬಿಸುತ್ತಾರೆ ಅನ್ನೋ ಅನುಮಾನ ಕಾಡುತ್ತಿದೆ. ನಾನು ಚುನಾವಣೆ ನಿಲ್ಲುವುದು ಫಿಕ್ಸ್ ಎಂದು ಹೇಳುವ ಮೂಲಕ ಬೆಳಗಾವಿ ನಾಯಕರ ಗಮನ ಸೆಳೆದಿದ್ದರೆ.