ಉ.ಕ ಸುದ್ದಿಜಾಲ ಬೆಳಗಾವಿ :
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಾಮಪತ್ರ ಸಲ್ಲಿಕೆ. ಅಣ್ಣಾಸಾಹೇಬ್ ಜೊಲ್ಲೆ ವಿರುದ್ದ ಉತ್ತಮ ಪಾಟೀಲ ನಾಮಪತ್ರ ಸಲ್ಲಿಕೆ. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಉತ್ತಮ ಪಾಟೀಲ.
ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಸಿದ ಬಳಿಕ ಉತ್ತಮ ಪಾಟೀಲ ಹೇಳಿಕೆ. ಡಿಸಿಸಿ ಬ್ಯಾಂಕ್ ಚುನಾವಣೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ನಿಪ್ಪಾಣಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಬೆಳಗಾವಿ ಜಿಲ್ಲೆ ಬಗ್ಗೆ ಗೊತ್ತಿಲ್ಲಾ ನಮ್ಮ ತಾಲೂಕಿನ ಬಗ್ಗೆ ವಿಚಾರ ಮಾಡಿ ನಾನು ಚುನಾವಣೆ ನಿಂತಿದ್ದೇನೆ. ನಾನು ಕೂಡಾ ಸಹಕಾರ ರಂಗದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿದ್ದೇನೆ.
ಎಂಪಿ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದ ಉತ್ತಮ ಪಾಟೀಲ. ಅಣ್ಣಾಸಾಹೇಬ್ ಜೊಲ್ಲೆಗೆ ಜಾರಕಿಹೊಳಿ ಬೆಂಬಲ್ ವಿಚಾರ. ನಾನು ಕೂಡಾ ಸತೀಶ ಜಾರಕಿಹೊಳಿ ಅವರಿಗೆ ಭೇಟಿ ಆಗಿದ್ದೇನೆ. ನನಗೂ ಕೂಡಾ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಿಲ್ಲುವಂತೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸತೀಶ ಜಾರಕಿಹೊಳಿ ತಿಳಿಸಿದ ಹಿನ್ನಲೆ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.
ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ವಿರುದ್ದ ನಿಂತಿದ್ದೀರಿ ಎನ್ನುವ ವಿಚಾರ. ನಾನು ಜೊಲ್ಲೆ ವಿರುದ್ದವೇ ನಿಂತಿದ್ದೇನೆ ಎಂದ ಉತ್ತಮ ಪಾಟೀಲ. ನಮ್ಮ ತಂದೆ ಕೂಡಾ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದ ಉತ್ತಮ ಪಾಟೀಲ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಾಮಪತ್ರ ಸಲ್ಲಿಸಿದ ಉದ್ಯಮಿ ಉತ್ತಮ ಪಾಟೀಲ
