ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ

ಉ.ಕ ಸುದ್ದಿಜಾಲ ಕಾಗವಾಡ :

ಕಾಂಟ್ರೊವರ್ಸಿ ಕಿಂಗ್ ರಾಜು ಕಾಗೆಯಿಂದ ಮತ್ತೊಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಕಾಗವಾಡ ಶಾಸಕ ರಾಜು ಕಾಗೆ. ಹಿಂದು ಕಾರ್ಯಕರ್ತರಿಗೆ ಬಿಕಾರ್‌ಚೋಟ್(ಗತಿ ಇಲ್ಲದ ಭಿಕ್ಷುಕ) ಎಂದ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ.

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.‌ರಾಮಲಲ್ಲಾನ ಮಂದಿರ ಸ್ಥಾಪಿಸದ್ದಕ್ಕಾಗಿ ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಡಿಗಳನ್ನು ಕಟ್ಟೊದ್ರಿಂದ ಸಮಾಧಾನವಾಗ್ತದೆ ಎಂದ್ರೆ ನಾವು ಗುಡಿಗಳನ್ನು ಕಟ್ತೇವೆ. ಬಿಜೆಪಿಯವರು ಜೈ ಶ್ರೀರಾಮ ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತಾ ಹೋಗ್ತಾರೆ. ಇದೆಲ್ಲವನ್ನು ನಾನು ಕಳೆದ 40 ವರ್ಷಗಳ ಹಿಂದೆನೇ ಮಾಡಿದ್ದೇನೆ.

ಅಂತಹವರಿಗೆ ಉತ್ತರ ಕೊಡಲು ನಾನು ಸಮರ್ಥನಿದ್ದೇನೆ, ಆದರೆ ಅವರು ನನ್ನ ಲೇವಲ್‌ನವರಲ್ಲ. ಅವರು ಬಿಕಾರ್‌ಚೋಟ್ ಇದ್ದಾರೆ. ಹೀಗಾಗಿ ಅಭಿವೃದ್ಧಿ ಬೇಕಾದ್ರೆ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಕಾಂಗ್ರೆಸ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದಾರೆ.