ಉ.ಕ ಸುದ್ದಿಜಾಲ ಚಿಕ್ಕೋಡಿ :
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಮೇ.7ರಂದು ಶಾಂತಿಯುತವಾಗಿ ಮತದಾನ ಜರುಗಿದ್ದು. ಶೇ. 78.66 ರಷ್ಟು ಮತದಾನವಾಗಿರುತ್ತದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ತಿಳಿಸಿರುತ್ತಾರೆ.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ 8,85,200 ಪುರುಷ, 8,76,414 ಮಹಿಳಾ ಹಾಗೂ 80 ಇತರೆ ಮತದಾರರು ಸೇರಿದಂತೆ ಒಟ್ಟು 17,61,694 ಮತದಾರರು ಇದ್ದು ಈ ಪೈಕಿ 7,05,041 ಪುರುಷ ಮತದಾರರು, 6,80,617 ಮಹಿಳಾ ಹಾಗೂ 30 ಇತರೆ ಮತದಾರರು ಸೇರಿದಂತೆ ಒಟ್ಟು 13,85,688 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.
ವಿಧಾನಸಭಾ ಮತಕ್ಷೇತ್ರವಾರು ವಿವರ :
01- ನಿಪ್ಪಾಣಿ ವಿಧಾನ ಸಭಾ ಮತಕ್ಷೇತ್ರದಲ್ಲಿ 1,87,580 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ
94,297 ಪುರುಷ, 93,277 ಮಹಿಳಾ ಹಾಗೂ 6 ಇತರೆ ಮತದಾರರು ಮತ ಚಲಾಯಿಸಿದ್ದು ಶೇ. 79.90 ರಷ್ಟು ಮತದಾನವಾಗಿರುತ್ತದೆ.
02-ಚಿಕ್ಕೋಡಿ-ಸದಲಗಾ ವಿಧಾನ ಸಭಾ ಮತಕ್ಷೇತ್ರದಲ್ಲಿ 1,85,452 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ 93,453 ಪುರುಷ, 91,993 ಮಹಿಳಾ ಹಾಗೂ 6 ಇತರೆ ಮತದಾರರು ತಮ್ಮ ಮತ ಚಲಾಯಿಸಿದ್ದು ಶೇ. 79.60 ರಷ್ಟು ಮತದಾನವಾಗಿರುತ್ತದೆ.
03-ಅಥಣಿ ವಿಧಾನ ಸಭಾ ಮತಕ್ಷೇತ್ರದಲ್ಲಿ1,89,061 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ 97,823 ಪುರುಷ, 91,236 ಮಹಿಳಾ ಹಾಗೂ 2 ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ.78.89 ರಷ್ಟು ಮತದಾನ ವಾಗಿರುತ್ತದೆ.
04-ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ 1,61,989 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ 83,319 ಪುರುಷ, 78,668 ಮಹಿಳಾ ಹಾಗೂ 2 ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ. 78.96 ರಷ್ಟು ಮತದಾನವಾಗಿರುತ್ತದೆ.
05-ಕುಡಚಿ ವಿಧಾನಸಭಾ ಮತಕ್ಷೇತ್ರದಲ್ಲಿ 1,53,148 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ 79,525 ಪುರುಷ, 73,616 ಮಹಿಳಾ ಹಾಗೂ 7 ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ. 75.04 ರಷ್ಟು ಮತದಾನವಾಗಿರುತ್ತದೆ.
06-ರಾಯಬಾಗ ವಿಧಾನಸಭಾ ಮತಕ್ಷೇತ್ರದಲ್ಲಿ 1,68,289 ಮತದಾರರು ತಮ್ಮ ಹಕ್ಕನ್ನು ಚಲಾಯಿಸುರತ್ತಾರೆ. ಈ ಪೈಕಿ 86,820 ಪುರುಷ, 81,466 ಮಹಿಳಾ ಹಾಗೂ 3 ಇತರೆ ಮದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ. 76.04 ರಷ್ಟು ಮತದಾನವಾಗಿರುತ್ತದೆ.
07-ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದಲ್ಲಿ 1,68,725 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ 84,622 ಪುರುಷ, 84,101 ಮಹಿಳಾ ಹಾಗೂ 2 ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ. 78.40 ರಷ್ಟು ಮತದಾನವಾಗಿರುತ್ತದೆ.
10-ಯಮಕನಮರಡಿ ವಿಧಾನಸಭಾ ಮತಕ್ಷೇತ್ರದಲ್ಲಿ 1,71,444 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ. ಈ ಪೈಕಿ 85,182 ಪುರುಷ, 86,260 ಮಹಿಳಾ ಹಾಗೂ 2 ಇತರೆ ಮತದಾರರು ಮತ ಚಲಾಯಿಸಿದ್ದು ಶೇ. 82.22 ರಷ್ಟು ಮತದಾನವಾಗಿರುತ್ತದೆ.