ಉ.ಕ ಸುದ್ದಿಜಾಲ ಚಿಕ್ಕೋಡಿ :
ರೈತನ ಮಗ ಓದಿನಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ದ್ವೀತಿಯ, ಬೆಳಗಾವಿ ಜಿಲ್ಲೆಗೆ ಪ್ರಥಮ ಬಂದು ಇತರ ರೈತ ಮಕ್ಕಳಿಗೆ ಮಾದರಿಯಾಗದ್ದಾನೆ. ಹೌದು ಬೆಳಗಾವಿ ಜಿಲ್ಲಯ ಕಾಗವಾಡ ತಾಲೂಕಿನ ಲೋಕುರ ಗ್ರಾಮದ ವಿದ್ಯಾರ್ಥಿ ಸಿದ್ದಾಂತ ರೈತನ ಮಗ ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಸಿದ್ದಾಂತ ನಾಯಿಕಬಾ. ಈ ವಿದ್ಯಾರ್ಥಿ ರಾಜ್ಯಕ್ಕೆ ಎಸ್ಎಸ್ಎಲ್ಸಿ ಫಲಿತಾಂಶದ ಮೂಲಕ ದ್ವಿತೀಯ ಸ್ಥಾನ ಪಡೆದು ಹೆಸರು ಮಾಡಿದ್ದಾನೆ. ಅಂದಹಾಗೆಯೇ ಈತ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಲೋಕುರ ಗ್ರಾಮದವನಾಗಿದ್ದಾನೆ.
ಸಿದ್ದಾಂತ ನಾಯಿಕಬಾ ವಿದ್ಯಾರ್ಥಿ ಆಚಾರ್ಯ ಸುಬಲಸಾಗರ ಫ್ರೌಢ ವಿದ್ಯಾಮಂದಿರಲ್ಲಿ SSLC ವ್ಯಾಸಾಂಗ ಮಾಡಿದ್ದಾನೆ. ಗಡಿ ಭಾಗದ ವಿದ್ಯಾರ್ಥಿ 625/624 ಅಂಕ ಪಡೆಯುವ ಮೂಲಕ ಮನೆಯವರ ಮುಖದಲ್ಲಿ ಸಂತಸ ಚೆಲ್ಲುವಂತೆ ಮಾಡಿದ್ದಾನೆ.
ಸಿದ್ದಾಂತ ನಾಯಿಕಬಾ ಇಂಗ್ಲೀಷ್ ಹೊರತು ಪಡಿಸಿ ಎಲ್ಲ ವಿಷಯಗಳಲ್ಲೂ ಸಮಾನ ಅಂಕ ಪಡೆದಿದ್ದಾರೆ.
ಸಂತಸದ ಸಂಗತಿ ಎಂದರೆ ಸಿದ್ದಾಂತ ರೈತನ ಮಗನಾಗಿದ್ದು, ದೇಶದ ಬೆನ್ನೆಲುಬಾರಿರುವ ರೈತರ ಮಕ್ಕಳು ಇಂತಹ ಸಾಧನೆ ಮಾಡಿ ಇತರ ರೈತ ಮಕ್ಕಳಿಗೆ ಮಾದರಿಯಾಗಿದ್ದಾನೆ ಸಿದ್ದಾಂತ.