ಉ.ಕ ಸುದ್ದಿಜಾಲ ಬೆಳಗಾವಿ :
ಜಾರಕಿಹೊಳಿ ಹಾಗೂ ಸವದಿ ಜಗಳದಲ್ಲಿ ಸಿಎಂ ಹಾಗೂ ರಾಜ್ಯ ಸರ್ಕಾರದ ಜಾಣ ನಡೆ ಜಾರಕಿಹೊಳಿ ಬ್ರದರ್ಸ್, ಲಕ್ಷ್ಮಣ ಸವದಿ ಮಧ್ಯೆ ಯುದ್ಧದಲ್ಲಿ ಸಿದ್ದರಾಮಯ್ಯ ಜಾಣನಡೆ, ಬೆಳಗಾವಿ ಜಿಲ್ಲಾ ವಿಭಜನೆ ಪ್ರಯತ್ನದ ವಿಚಾರವಾಗಿ ಸವದಿ, ಜಾರಕಿಹೊಳಿ ಮಧ್ಯೆ ನಾ ಮುಂದು… ತಾ ಮುಂದು ಸ್ಪರ್ಧೆ..!
ಜಿಲ್ಲಾ ವಿಭಜನೆ ವಿಚಾರದಲ್ಲೂ ಪೈಪೋಟಿಗಳಿದ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಣ ಸವದಿ ಮೊನ್ನೆಯಷ್ಟೇ ಗೋಕಾಕ ಜಿಲ್ಲಾ ರಚನೆಗೆ ಸಿಎಂ ಭೇಟಿ ಆಗಿದ್ದ ಜಾರಕಿಹೊಳಿ ಬ್ರದರ್ಸ್ ಅಖಂಡ ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಜಿಲ್ಲೆ ರಚಿಸುವಂತೆ ಜಾರಕಿಹೊಳಿ ಬ್ರದರ್ಸ್ ಹಕ್ಕೋತ್ತಾಯ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಿಎಂ ಭೇಟಿ
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಿದ್ದರಾಮಯ್ಯ ಭೇಟಿ ಆಗಿ ಜಾರಕಿಹೊಳಿ ಬ್ರದರ್ಸ್ ಹಕ್ಕೋತ್ತಾಯ ಜಾರಕಿಹೊಳಿ ಬ್ರದರ್ಸ್ ಸಿಎಂ ಭೇಟಿ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಲರ್ಟ್ ಗಡಿಭಾಗ ಅಥಣಿಯನ್ನೂ ಜಿಲ್ಲಾ ಕೇಂದ್ರ ಮಾಡುವಂತೆ ಲಕ್ಷ್ಮಣ ಸವದಿ ಬೇಡಿಕೆ
ಈ ವಿಚಾರವಾಗಿ ಇಂದು ಸಿಎಂ ಭೇಟಿ ಆಗಲಿರುವ ಲಕ್ಷ್ಮಣ ಸವದಿ ನೇತೃತ್ವದ ನಿಯೋಗ ಅಥಣಿ ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಕರೆ ಕೊಟ್ಟ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಿಎಂ ಭೇಟಿಗೆ ಅವಕಾಶ ಸಿಕ್ಕಿದ್ದು ಸಮಿತಿ ಸದಸ್ಯರು ಬರುವಂತೆ ಸವದಿ ಮನವಿ.
ಜಿಲ್ಲಾ ರಾಜಕಾರಣ, ಸಹಕಾರ ಕ್ಷೇತ್ರದ ಬಳಿಕ ಸವದಿ ಜಾರಕಿಹೊಳಿ ಬ್ರದರ್ಸ್ ಮಧ್ಯೆ ಮತ್ತೊಂದು ಯುದ್ಧ ಪ್ರಭಾವಿ ಕಾಂಗ್ರೆಸ್ ನಾಯಕರ ಬೇಡಿಕೆಗೆ ಇಕ್ಕಟ್ಟಿಗೆ ಸಿಲುಕಿದ ಸಿಎಂ ಸಿದ್ದರಾಮಯ್ಯ ಕಂದಾಯ ಸಚಿವರ ಮೂಲಕ ಸದನಕ್ಕೆ ಲಿಖಿತ ಉತ್ತರ ಕೊಡಿಸಿದ ಸಿಎಂ ಸಿದ್ದರಾಮಯ್ಯ
ನೂತನ ತಾಲೂಕು, ಜಿಲ್ಲಾ, ಹೋಬಳಿ ರಚನೆಗೆ ಆರ್ಥಿಕ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಉತ್ತರ ಸಿದ್ದರಾಮಯ್ಯ ಜಾಣನಡೆಯಿಂದ ತೀವ್ರ ನಿರಾಸೆಗೆ ಒಳಗಾದ ಜಿಲ್ಲಾ ವಿಭಾಜನೆ ಹೋರಾಟಗಾರರು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಚುಕ್ಕೆ ಗುರುತಿನ ಪ್ರಶ್ನೆಗೆ ಸರ್ಕಾರದ ಉತ್ತರ ನೂತನ ಜಿಲ್ಲಾ ಹಾಗೂ ಹೋಬಳಿ ರಚನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಇಲ್ಲ ಎಂದು ಉತ್ತರ
ಬೆಳಗಾವಿ ಜಿಲ್ಲಾ ವಿಭಜನೆ ಪ್ರಯತ್ನದ ವಿಚಾರವಾಗಿ ಸವದಿ, ಜಾರಕಿಹೊಳಿ ಮಧ್ಯೆ ನಾ ಮುಂದು… ತಾ ಮುಂದು ಸ್ಪರ್ಧೆ..!

