ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ತಗುಲಿ ಸಿಬ್ಬಂದಿ ಸಾವು. ಮೂರು ಗಂಟೆ ಜೋತಾಡುತ್ತಿರುವ ಹೆಸ್ಕಾಂ ಸಿಬ್ಬಂದಿ ಮೃತದೇಹ ಹತ್ತಿರಕ್ಕೆ ಬರದ ಅಧಿಕಾರಿಗಳು. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದ ಘಟನೆ.

ಮಾರುತಿ ಅವಲಿ(25) ಬಗರನಾಳ ಗ್ರಾಮದ ಹೆಸ್ಕಾಂ ಸಿಬ್ಬಂದಿ ಸಾವು. ಮುಗಳಿಹಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡುವಾಗ ವಿದ್ಯುತ್ ತಗುಲಿ ಸಾವು.

ವಿದ್ಯುತ್ ಕಂಬದ ಮೇಲೆ ಹತ್ತಿ ಕಾರ್ಯನಿರ್ವಹಿಸುತ್ತಿರುವಾಗ ನಡೆದ ಘಟನೆ. ಏಕಾಏಕಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಹೆಸ್ಕಾಂ ಸಿಬ್ಬಂದಿ.

3 ಗಂಟೆಯಿಂದ ಮೃತದೇಹ ವಿದ್ಯುತ್ ಕಂಬದ ಮೇಲೆ ಜೋತಾಡುತ್ತಿದ್ದರು ಸನಿಹಕ್ಕೆ ಬರದ ಹೆಸ್ಕಾಂ ಅಧಿಕಾರಿಗಳು. ಹೆಸ್ಕಾಂ ಅಧಿಕಾರಿಗಳ ವಿರುದ್ದ ಮುಗಳಿಹಾಳ ಗ್ರಾಮಸ್ಥರ ಆಕ್ರೋಶ.