ಉ.ಕ ಸುದ್ದಿಜಾಲ ಬೆಳಗಾವಿ :

ಉತ್ತರ ಕರ್ನಾಟಕದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಗೆ ಕಾರ್ಯಾಧ್ಯಕ್ಷರಾಗಿ ಅಮಿತ್ ಕೋರೆ ಇಂದು ಆಯ್ಕೆಯಾಗಿದ್ದಾರೆ. ಸಂಸ್ಥೆಗೆ 40 ವರ್ಷಗಳ ಕಾಲ ಪ್ರಭಾಕರ್ ಕೋರೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದರು.

ಜನವರಿಯಲ್ಲಿ ನಡೆದ ನಿರ್ದೇಶಕ ಸ್ಥಾನದ ಚುನಾವಣೆ ವೇಳೆ ಕೋರೆ ಸ್ಪರ್ಧೆ ಮಾಡಿರಲಿಲ್ಲ. ಕೋರೆ ಪತ್ರ ಅಮಿತ್ ಕೋರೆ, ಪುತ್ರಿ ಪ್ರೀತಿ ದೊಡ್ಡವಾಡಗೆ ಅವಕಾಶ ಕಲ್ಪಿಸಿದರು.

ಇಬ್ಬರ ಪೈಕಿ ಈಗ ಅಮಿತ್ ಕೋರೆಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಕೆಎಲ್ಇ ಸಂಸ್ಥೆಯಲ್ಲಿ ಅಧ್ಯಕ್ಷ ಸ್ಥಾನಕ್ಕಿಂತಲೂ ಕಾರ್ಯಾಧ್ಯಕ್ಷ ಸ್ಥಾನವೇ ಪವರ್ ಫುಲ್.