ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಉಸಿರುಗಟ್ಟಿ ಮೂವರು ದಾರುಣ ಸಾವು; ಓರ್ವ‌ನ ಸ್ಥಿತಿ ಗಂಭೀರ! ಕಾರ್ಯಕ್ರಮವೊಂದಕ್ಕೆ ಹೋಗಿ ಮನೆಗೆ ಬಂದಿದ್ದ ನಾಲ್ವರು ಯುವಕರ ಪೈಕಿ ಮೂವರು ಸಾವು, ಓರ್ವ ಗಂಭೀರ. ಬೆಳಗಾವಿಯಲ್ಲಿ ಹೆಚ್ಚಿನ ಚಳಿ ಹಿನ್ನೆಲೆ ರೂಮನಲ್ಲಿ ಇದ್ದಿಲಿನ ಬೆಂಕಿ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರು.

ಚಳಿಗೆ ಬಿಸಿಯಾಗಲೇಂದು ಪಕ್ಕದಲ್ಲೇ ಇದ್ದಿಲು ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರು. ನಿದ್ರೆಗೆ ಜಾರಿದಾಗ ರೂಮನಲ್ಲೇ ಹೊಗೆಯಾಡಿ ಉಸಿರಾಟದ ಸಮಸ್ಯೆ ಸಾವು ಶಂಕೆ. ಆಮ್ಲಜನಕದ ಸಮಸ್ಯೆಯಿಂದ ಒದ್ದಾಡಿ ಸ್ಥಳದಲ್ಲೇ ಮೂವರು ಸಾವು.

ಬೆಳಗಾವಿ ನಗರದ ಅಮನ್ ನಗರದ ನಿವಾಸಿ ರಿಹಾನ್ ಮತ್ತೆ( 22), ಮೋಹಿನ್ ನಾಲಬಂದ(23), ಸರ್ಫರಾಜ್ ಹರಪ್ಪನಹಳ್ಳಿ,(22) ಸಾವು. ಮತ್ತೋರ್ವ ಯುವಕನ ಶಾಹನಾವಾಜ್(19) ಗಂಭೀರ.

ಸ್ಥಳಕ್ಕೆ ಮಾಳಮಾರುತಿ ಪೊಲೀಸರು, ಶಾಸಕ ಆಸೀಫ್ ಸೇಠ ಭೇಟಿ, ಪರಿಶೀಲನೆ. ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.