ಉ.ಕ ಸುದ್ದಿಜಾಲ ಬೆಳಗಾವಿ :

ಆರ್ಬಿಟರ್’ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಿದ ಹೈ-ಟೆಕ್ ಟಿ.ವಿ.ಎಸ್ ದಸರಾದಿಂದ ದೀಪಾವಳಿ ವರೆಗೆ ವಿಶೇಷ ಆಫರ್ ಇಂದೆ ತ್ವರೆ ಮಾಡಿ… ಹೊಸ ಆರ್ಬಿಟರ್ ವಾಹನ ನಿಮ್ಮದಾಗಿಸಿಕೊಳ್ಳಿ ಹೈ-ಟೆಕ್ ಟಿ.ವಿ.ಎಸ್ ವತಿಯಿಂದ ‘ಆರ್ಬಿಟರ್’ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಲಾಗಿದ್ದು, ಅಲ್ಲದೇ ದಸರಾ ಮತ್ತು ದೀಪಾವಳಿಯ ವರೆಗೆ ವಿಶೇಷ ಆಫರ್ ಮತ್ತು ಲಕ್ಕಿ ಡ್ರಾಗಳನ್ನು ಗ್ರಾಹಕರಿಗಾಗಿ ಆರಂಭಿಸಿದೆ.

ಹೌದು, ಬೆಳಗಾವಿ ನಗರರದ ಟಿ.ವ್ಹಿ.ಎಸ್ ಕಂಪನಿಯ ಹೊಸ ಹೊಸ ಅತ್ಯಾಧುನಿಕ ಬೈಕ್’ಗಳನ್ನು ಪರಿಚಯಿಸುವ ಹೈ-ಟೆಕ್ ಟಿ.ವ್ಹಿ.ಎಸ್. ಕಂಪನಿ ಈಗ ತನ್ನ ಇಲೆಕ್ಟ್ರಿಕಲ್ ವಾಹನ ‘ಆರ್ಬಿಟರ್’ನ್ನು ಗ್ರಾಹಕರಿಗೆ ಪರಿಚಯಿಸಿದೆ. ಬೆಳಗಾವಿಯಲ್ಲಿ ತನ್ನ ಸೇವೆಯನ್ನು ಆರಂಭಿಸಿದ ಆರ್ಬಿಟರ್ ವಾಹನವನ್ನು ಬೆಳಗಾವಿಯ ಗೋಮಟೇಶ್ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ವೈಬ್ರೆಂಟ್ ದಾಂಡಿಯಾ 2025 ಲಾಂಚ್ ಮಾಡಲಾಯಿತು.

ಹೈ-ಟೆಕ್ ಟಿವಿಎಸ್‌ನ ನಿರ್ದೇಶಕರಾದ ರಾಜೇಶ್ ಭೋಸಗಿ, ವಿನಯಕುಮಾರ್ ಬಾಳಿಕಾಯಿ, ಬಸವರಾಜ್ ತಂಗಡಿ, ಮತ್ತು ರಾಜೇಂದ್ರ ದೇಸಾಯಿ ಅವರ ಉಪಸ್ಥಿತಿಯಲ್ಲಿ ಜಿಎಂ ವಿನೋದ್ ಮತ್ತು ಮ್ಯಾನೇಜರ್ ರಾಯ್ , ರೋಟೆರಿಯನ್ ರವಿ, ರೋಟೆರಿಯನ್ ರಾಜ್‌ಪುರೋಹಿತ್, ರೋಟೆರಿಯನ್ ಶಶಿಕಾಂತ್ ನಾಯಕ್ , ಮಾನ್ವೇಂದ್ರಸಿಂಗ್ ಜೆ ಮತ್ತು ಶರದ್ ಹೆಡಾ ಅವರು ಈ ವಾಹನವನ್ನು ಅಧಿಕೃತವಾಗಿ ಅನಾವರಣಗೊಳಿಸಿದರು.

ಈ ವೇಳೆ ಹೈ-ಟೆಕ್ ಟಿವಿಎಸ್‌ನ ನಿರ್ದೇಶಕರಾದ ರಾಜೇಶ್ ಭೋಸಗಿ ಮತ್ತು ವಿನಯಕುಮಾರ್ ಬಾಳಿಕಾಯಿ ಅವರು ಹೈಟೆಕ್ ಟಿ.ವ್ಹಿ.ಎಸ್.ನಲ್ಲಿ ಲಭ್ಯವಿರುವ ಟಿ.ವ್ಹಿ.ಎಸ್.ನ ‘ಆರ್ಬಿಟರ್’ ಇ.ವಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಉತ್ತರ ಕರ್ನಾಟಕದಲ್ಲಿ ಮೊದಲ ತ್ರೈಮಾಸಿಕದಲ್ಲಿ ನಂ. 1 ಮಾರುಕಟ್ಟೆ ಪಾಲನ್ನು ಸಾಧಿಸಿದ ಹರ್ಷ ವ್ಯಕ್ತಪಡಿಸಿದರು. ಹೈ-ಟೆಕ್ ಟಿವಿಎಸ್‌ನ ಬೆಳವಣಿಗೆ ಹಾಗೂ ಇವಿ (EV) ಕಾರ್ಯಕ್ಷಮತೆಯ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.

ಹೈಟೆಕ್ ಟಿವ್ಹಿಎಸ್’ನಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ನಿಮಿತ್ಯ ವಿಶೇಷ ಆಫರ್ ನಡೆಯುತ್ತಿದೆ. ಲೋ ಡೌನಮೆಪೇಮೆಂಟ್, ಹಳೆಯ ಬೈಕ್ ನೀಡಿ ಹೊಸ ಬೈಕ್ ಖರೀದಿಸಲು ಎಕ್ಸಚೇಂಜ್ ಆಫರ್, ಜಿ.ಎಸ್.ಟಿ. ಕಡಿತ, ಸ್ಕ್ರಾಚ್ ಕಾರ್ಡ್ ಮೂಲಕ ಗೋಲ್ಡ್ ಕ್ವಾಯಿನ್, ಸಿಲ್ವರ್ ಕ್ವಾಯಿನ್, ಹೆಲ್ಮೆಟ್, ಕವರ್ ಅದರಂತೆ ಲಕ್ಕಿ ಡ್ರಾನಲ್ಲಿ ಕಾರು, ಫ್ರಿಜ್ ನಂತಹ ವಿವಿಧ ಆಫರ್’ಗಳು ನಡೆಯುತ್ತಿದೆ. ದಸರಾ, ದೀಪಾವಳಿ ಹಬ್ಬದ ವರೆಗೆ ಈ ಆಫರ್ ಜಾರಿಯಲ್ಲಿರಲಿದೆ ಎಂದು ಯೊಗೇಶ್ ಹೇಳಿದರು.

ಟಿ.ವ್ಹಿ.ಎಸ್. ಆರ್ಬಿಟರ್ ಅತ್ಯಾಧುನಿಕ ಡಿಸೈನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. 14 ಇಂಚ್ ಟೈರ್ಸ್, ಡಿ ಆರ್ ಎಲ್, ಎಲ್.ಇ.ಡಿ ಹೆಡ್ ಲ್ಯಾಂಪ್ಸ್, ಅತ್ಯಾಧುನಿಕ ಡಿಸಪ್ಲೆ, 43 ಲೀಟರ್ಸ್ ಡಿಕ್ಕಿ ಸ್ಪೇಸ್, ದೂರದ ಪ್ರಯಾಣಕ್ಕೆ ಅನುಕೂಲಕ್ಕಾಗಿ ಕ್ರೂಸ್ ಕಂಟ್ರೋಲ್ ಅಳವಡಿಸಲಾಗಿದೆ. ನ್ಯಾವೇಗೆಷನ್, ರಿವರ್ಸ್, ಮೇಸೆಂಜ್ ಅಲರ್ಟ್ ಇನ್ನುಳಿದ ಸೌಲಭ್ಯಗಳು ದೊರೆಯುತ್ತವೆ.

ಹಾಗಾದರೇ ಇನ್ನೇಕೆ ತಡ ಬೆಳಗಾವಿಯ ಹಳೆಯ ಪುನಾ ಬೆಂಗಳೂರು ರಸ್ತೆ ಮತ್ತು ಖಾನಾಪುರ ರಸ್ತೆ, ಡಿ-ಮಾರ್ಟ್ ಹತ್ತಿರ, ಥರ್ಡ್ ಗೇಟ್ ಹತ್ತಿರವಿರುವ ಹೈ-ಟೆಕ್ ಟಿವಿಎಸ್ ಶೋರೂಂಗೆ ಭೇಟಿ ನೀಡಿ, ಇಂದೇ ಇ.ವಿ. ಆರ್ಬಿಟರ್’ನ್ನು ಖರೀದಿಸಿ, ನಿಮ್ಮ ದಸರಾ ದೀಪಾವಳಿ ಹಬ್ಬವನ್ನು ಆನಂದಿಸಿ.