ಉ.ಕ ಸುದ್ದಿಜಾಲ ಚಿಕ್ಕೋಡಿ :

ಎತ್ತ ಸಾಗುತ್ತಿದೆ ಯುವಪೀಳಿಗೆ. ಪ್ರೀತಿಸಿದ ಯುವತಿ ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕಾಗಿ ಆತ್ಮಹತ್ಯಗೆ ಯತ್ನಿಸಿದ ಯುವಕ. ಪ್ರಜ್ವಲ್ ಹಿರೇಮಠ ಎಂಬ ಯುವಕನಿಂದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದ ಯುವಕ. ಪ್ರೀತಿಸಿದ ಯುವತಿ ಮತ್ತೊರ್ವ ಯುವಕನೊಂದಿಗೆ ಸಲುಗೆಯಿಂದ ಮಾತನಾಡಿದ್ದಕ್ಕೆ ಬ್ರೇಕ್ ಅಪ್. ನನ್ನ ಸಾವಿಗೆ ಆತ್ಮಶಾಂತಿ ಸಿಗಬೇಕೆಂದರೆ ಪ್ರೇಯಸಿಯ ಲವರ್‌ಗೆ ಕಠಿಣ ಶಿಕ್ಷೆ ನೀಡುವಂತೆ ಯುವಕನ ಮನವಿ.

ಯುವಕ ತನ್ನ ವಾಟ್ಸ್‌ಪ್ ಸ್ಟೇಟಸ್‌ನಲ್ಲಿ ಲಾಸ್ಟ್ ಆಪ್ಶನ್ ಎಂದು ಬರೆಹ ಇಟ್ಟು ಆತ್ಮಹತ್ಯೆಗೆ ಯತ್ನ. ಯುವಕನ ಆತ್ಮಹತ್ಯೆ ತಡೆದ ಕುಟುಂಬಸ್ಥರು. ಚಿಂತಾಜನಕ ಸ್ಥಿತಿಯಲ್ಲಿ ಯುವಕ ಪ್ರಜ್ವಲ್. ಕುಟುಂಬಸ್ಥರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.