ಉ.ಕ ಸುದ್ದಿಜಾಲ ಚಿಕ್ಕೋಡಿ :

ಪ್ರತಿಭಾನ್ವಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟಕ್ಕೆ ಗುರುತಿಸಿಕೊಳ್ಳಲು ಒಂದು ಸುವರ್ಣ ಅವಕಾಶ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ವರ್ಷ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ನಡೆಯುವ ಸತೀಶ್‌ ಶುಗರ್ಸ್‌ ಅವಾರ್ಡ್ಸ್ ಕಾರ್ಯಕ್ರಮ ಚಿಕ್ಕೋಡಿ ಪಟ್ಟಣದಲ್ಲಿ ಎರಡನೇ ಬಾರಿಗೆ “ಸತೀಶ್‌ ಶುಗರ್ಸ್‌ ಅವಾರ್ಡ್ಸ್ ಚಿಕ್ಕೋಡಿ – 2025” ಗ್ರ್ಯಾಂಡ್ ಫಿನಾಲೆ ಇದೆ.

ಡಿಸೆಂಬರ್ 27 ಮತ್ತು 28 ರಂದು ಎರೆಡು ದಿನಗಳ ಕಾಲ ನಗರದ ಕಿವಾಡ್ ಗ್ರೌಂಡ್ ನಲ್ಲಿ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ತಿಳಿಸಿದರು. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಮಕ್ಕಳ ಮುಂದಾಳತ್ವದಲ್ಲಿ ನಡೆಯುವ ಕಾರ್ಯಕ್ರಮ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಕಾಲೇಜು ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಗುರುತಿಸಿಕೊಂಡು ರಾಜ್ಯ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿಕೊಳ್ಳಲು ಈ ವೇದಿಕೆ ಪೂರಕವಾಗಿದೆ.

ಭಾಷಣ ಸ್ಪರ್ಧೆ, ನಿಬಂಧನೆಗಳು, ಗಾಯನ ಸ್ಪರ್ಧೆ, ಜಾನಪದ ಗಾಯನ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಈಗಾಲೇ ಹಾರೂಗೇರಿ ಪಟ್ಟಣದಲ್ಲಿ ಒಂದು ಹಂತದ ಮುಗಿದಿದೆ ಫೈನಲ್ ಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.