ಉ.ಕ‌ ಸುದ್ದಿಜಾಲ ಚಿಕ್ಕೋಡಿ :

ಕಳೆದ ಒಂದು ವಾರದಿಂದ ಕೃಷ್ಣಾ ನದಿ ಒಳ ಹರಿವಿನಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆ ಪುರಾತನ ಕಾಲದ ಯಡೂರ ವೀರಭದ್ರೇಶ್ವರ ಶಿವಲಿಂಗ ಜಲಾವೃತ ಗೊಂಡಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಜಲಾವೃತ ಕೃಷ್ಣಾ ನದಿ ನೀರಿನಲ್ಲಿ ಜಲ ದಿಗ್ಬಂಧನಗೊಂಡ ದೇವಾಲಯ ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಕೆಲವೆ ನಿಮಿಷಗಳಲ್ಲಿ ಶಿವಲಿಂಗ ಜಲಾವೃತ.

ಶಿವಲಿಂಗ ಜಲಾವೃತಗೊಳ್ಳುವ ಮುಂಚೆ ಆಚಾರ್ಯಗಳಿಂದ ಹಾಗೂ ಭಕ್ತ ಸಮೂಹದಿಂದ ಲಿಂಗಕ್ಕೆ ಆರತಿ ಮಾಡಲಾಯಿತು. ಸದ್ಯ ದೂರದಿಂದಲೇ ದೇವರಿಗೆ ನಮಸ್ಕಾರ ಮಾಡುತ್ತಿರುವ ಭಕ್ತರು.

ದೇವಸ್ಥಾನ ಆವರಣಕ್ಕೆ ಕೃಷ್ಣೆ ಬರುತ್ತಿದ್ದಂತೆ ಪೂಜೆ ಸಲ್ಲಿಸ ಅರ್ಚಕರು ಅಮಾವಾಸ್ಯೆಯ ಹಿನ್ನೆಲೆ ದೂರಿನಿಂದ ದೇವರ ದರ್ಶನ ಪಡೆದ ಭಕ್ತರು ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಸುಪ್ರಸಿದ್ಧ ದೇವಾಲಯ ಇದಾಗಿದ್ದು ಅಪಾರ ಪ್ರಮಾಣದ ಭಕ್ತರನ್ನ ಹೊಂದಿರುವ ದೇವಸ್ಥಾನ ಇದಾಗಿದೆ‌.