ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ್ ಹತ್ಯೆ ಪ್ರಕರಣ.
ಅನೈತಿಕ ಸಂಬಂಧ ವಿಚಾರಕ್ಕೆ ನಡೆದಿತ್ತು ಭೀಕರ ಕೊಲೆ. ಆತನ ಕೊಲೆ ಬಳಿಕ ಗಂಡ ಹಾಕಿದ್ದ ಹೆಂಡತಿ ಕೊಲೆಗೆ ಸ್ಕೆಚ್. ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕುಳಿದ ಪತ್ನಿ.
ಕೊಲೆ ಪ್ರಕರಣ ಕುರಿತು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಸ್ಪಷ್ಟನೆ ನೀಡಿದ್ದು ಸೆ. 17 ರಂದು ಶಹಾಬಂದರ್ ಗ್ರಾಮದ ಹೊರವಲಯದಲ್ಲಿ ನಡೆದ ಕೊಲೆ. ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ್ ಗ್ರಾಮ. ಮಾಹಾಂತೇಶ ಬುಕನಟ್ಟಿ (24) ಕೊಲೆಗೀಡಾದ ವ್ಯಕ್ತಿ
ಸಹೋದರ ಸಂಬಂಧಿಯಿಂದಲೇ ನಡೆದಿತ್ತು ಮಹಾಂತೇಶ್ ನ ಕೊಲೆ. ಬಸವರಾಜ ಬುಕನಟ್ಟಿ, ವಿಠ್ಠಲ ಬುಕನಟ್ಟಿ ಕೊಲೆ ಮಾಡಿದ ಆರೋಪಿಗಳು. ಪೊಲೀಸರ ತನಿಖೆ ವೇಳೆ ಬಯಲಾಯ್ತು ಕೊಲೆಗೆ ಕಾರಣ. ಪತ್ನಿ ಜೊತೆ ಅನೈತಿಕ ಸಂಬಂಧವೇ ಕೊಲೆ ಕಾರಣ. ಬಸವರಾಜ ಬುಕನಟ್ಟಿ ಪತ್ನಿ ಜೊತೆ ಮಾಹಾಂತೇಶ ಬುಕನಟ್ಟಿ ಹೊಂದಿದ್ದ ಅನೈತಿಕ ಸಂಬಂಧ.
ವಿಠ್ಠಲ ಸಹಾಯ ಪಡೆದು ಮಹಾಂತೇಶ್ ನಿಗೆ ಮುಹೂರ್ತ ಪಿಕ್ಸ್. ಕೊಲೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಬಸವರಾಜ. ಪೊಲೀಸರ ಕಾರ್ಯಾಚರಣೆ ವೇಳೆ ವಿಠ್ಠಲ ಬುಕನಟ್ಟಿ ಪೊಲೀಸರ ವಶಕ್ಕೆ. ಕೊಲೆ ಮಾಡಿ ಹೆಂಡತಿ ತವರೂರಾದ ಚಿಕ್ಕೋಡಿಗೆ ತೆರಳಿದ್ದ ಬಸವರಾಜ. ಕರಿಜ್ಮಾ ಬೈಕ್ ಮೇಲೆ ಚಿಕ್ಕೋಡಿಗೆ ತೆರಳಿದ್ದ ಬಸವರಾಜ.
ಯಮಕನಮರಡಿ ಪೊಲೀಸರಿಂದ ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ರವಾನೆ. ಕರಿಜ್ಮಾ ಬೈಕ್ ನಿಂದ ಕೊಲೆಗಾರ ಬಸವರಾಜನ ಪತ್ತೆ ಹಚ್ಚಿದ ಚಿಕ್ಕೋಡಿ ಪೊಲೀಸರು. ಚಿಕ್ಕೋಡಿ ಲಾಡ್ಜ್ ನಲ್ಲಿ ಉಳಿದು ಹೆಂಡತಿ ಕೊಲೆಗೆ ಬಸವರಾಜ ಸಂಚು. ಆರೋಪಿಯನ್ನು ಬಂಧಿಸಿ ಬ್ಯಾಗ್ ಪರಿಶೀಲನೆ ವೇಳೆ ಕೆಲವು ಮಾರಕಾಸ್ತ್ರ ಪತ್ತೆ.
ಪರಿಶೀಲನೆ ವೇಳೆ ಬಯಲಾಯ್ತು ಪತ್ನಿ ಕೊಲೆಗೆ ರೂಪಿಸಿದ ಸತ್ಯ. ಆರೋಪಿಯನ್ನು ಯಮಕನಮರಡಿ ಪೊಲೀಸರಿಗೆ ರವಾನೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು. ಯಮಕನಮರಡಿ, ಚಿಕ್ಕೋಡಿ ಠಾಣೆಯ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಎಸ್ಪಿ ಭೀಮಾಶಂಕರ ಗುಳೇದ.
ಅನೈತಿಕ ಸಂಬಂಧ ವಿಚಾರಕ್ಕೆ ನಡೆದಿತ್ತು ಭೀಕರ ಕೊಲೆ – ಬೆಳಗಾವಿ ಎಸ್ಪಿ ಭೀಮಾಶಂಕರ ಏನಂತಾರೆ?


