ಉ.ಕ ಸುದ್ದಿಜಾಲ ಧಾರವಾಡ :

ಪ್ರೀತಿಸಿದ ಯುವತಿಗೆ ಬೇರೆಯವರೊಂದಿಗೆ ಮದುವೆ ನಿಶ್ಚೆಯ‌ಮಾಡಿದ ಹಿನ್ನಲೆಯಲ್ಲಿ ಮನನೊಂದ ಯುವಕನೊಬ್ಬ‌ ರೈಲ್ವೇ ಹಳ್ಳಿಗೆ ಬಿದ್ದ ಆತ್ಮಹತ್ಯೆ‌ ಮಾಡಿಕೊಂಡ ಘಟನೆ ಧಾರವಾಡದಲ್ಲಿಂದು ನಡೆದಿದ್ದು, ಯುವಕನ ಮೃತ ದೇಹ‌ನೋಡಿದ ಸ್ಥಳೀಯರು ಬೆಚ್ಚಿಬಿದಿದ್ದಾರೆ.

ಧಾರವಾಡ ತೇಜಸ್ವಿ ನಗರದ ರೈಲ್ವೆ ಹಳಿ ಮೇಲೆ ಈ ದುರ್ಘಟನೆ ನಡೆದಿದೆ. ಧಾರವಾಡ ಮದಾಲಗಾರ ಓಣಿಯ ಯುವಕ ಸಚಿನ್ (20) ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾನು ಪ್ರೀತಿ ಮಾಡಿದ ಯುವತಿಯ ಮದುವೆ ಬೇರೆಯವರ ಜೊತೆ ಫಿಕ್ಸ್ ಆಗಿದ್ದರಿಂದ ಮನನೊಂದ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರೈಲ್ವೇ ಪೊಲೀಸರು ಮೃತ ಶವ ಪರಿಶೀಲನೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದಾರೆ.