ಉ.ಕ ಸುದ್ದಿಜಾಲ ಹುಕ್ಕೇರಿ :
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಚುನಾವಣೆ ಹಿನ್ನಲೆ ಕುಟುಂಬ ಸಹಿತ ಪ್ರಚಾರಕ್ಕೆ ಇಳಿದ ಕತ್ತಿ ಕುಟುಂಬ, ಮಾಜಿ ಸಂಸದ ರಮೇಶ ಕತ್ತಿ ಹಿರಿಯ ಸುಪುತ್ರ ಪವನ ಕತ್ತಿ ಪ್ರಚಾರ ರಮೇಶ ಕತ್ತಿ ಹಾಗೂ ನಿಖೀಲ ಕತ್ತಿ, ಎ ಬಿ ಪಾಟೀಲ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಪ್ರಚಾರ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನಡೆದ ಸಭೆ ಉದ್ದೇಶಿಸಿ ಭಾಷಣ ಮಾಡಿದ ಪವನ ಕತ್ತಿ ನಾವ ಯಾರ ಉಸಾಬರಿಗೆ ಹೋಗೊದಿಲ್ಲ, ನಮ್ಮ ಉಸಾಬರಿಗೆ ಬಂದರೆ ನಾವ ಬಿಡೊದಿಲ್ಲ ಪರೋಕ್ಷವಾಗಿ ಜೊಲ್ಲೆ ಹಾಗೂ ಜಾರಕಿಹೋಳಿ ಕುಟುಂಬಕ್ಕೆ ಟಾಂಗ್ ನೀಡಿದ ಪವನ ಕತ್ತಿ.
ನಮ್ಮ ತಾಲೂಕಿನಲ್ಲಿ ನಮ್ಮ ಅಜ್ಜನ ಹಿಡಕೊಂಡ ಶಾಸಕ, ಸಚಿವರಾಗಿ ಹೋಗಿದ್ದಾರೆ ಆದರೆ, ಈ ವರೆಗೂ ಯಾವುದೇ ದಾಂದಲೆ ಗುಂಡಾಗಿರಿ ಪಿತ್ತೂರಿ ಆಗಿಲ್ಲ ಮೊನ್ನೆ ಹುಕ್ಕೇರಿ ತಾಲೂಕಿನಾದ್ಯಂತ ಗುಂಡಾಗಿರಿ ನಡೆದಿದೆ ಅದನ್ನೆಲ್ಲಾ ತಾವೂ ನೋಡಿದ್ದೀರಿ.
ಹುಕ್ಕೇರಿ ತಾಲೂಕಿನಲ್ಲಿ ನೀವ ಕಾಲ ಇಡಬೇಕೆಂದರೆ ಎಚ್ಚರಿಕೆಯಿಂದ ಕಾಲ ಇಡಿ ನಾವ ರೋಚಿಗೆದ್ದರೆ ಬೇರೆನೆ ಇರುತ್ತೆ ಎಂದು ಜಾರಕಿಹೋಳಿ ಕುಟುಂಬಕ್ಕೆ ಎಚ್ಚರಿಕೆ ನೀಡಿದ ಪವನ ಕತ್ತಿ, ಇದು ಜಾರಕಿಹೋಳಿ V/S ಕತ್ತಿ ಕುಟುಂಬ ಅಲ್ಲ ಹುಕ್ಕೇರಿ ಜನಸಾಮಾನ್ಯರ V/S ಜಾರಕಿಹೋಳಿ ಕುಟುಂಬ ಎಂದ ಪವನ ಕತ್ತಿ.
VIDIO – ಹುಕ್ಕೇರಿ ತಾಲೂಕಿನಲ್ಲಿ ನೀವ ಕಾಲ ಇಡಬೇಕೆಂದರೆ ಎಚ್ಚರಿಕೆಯಿಂದ ಕಾಲ ಇಡಿ : ಪವನ ಕತ್ತಿ ಈ ಮಾತ ಯಾರಿಗ ಹೇಳಿದ್ದು?
