ಉ.ಕ ಸುದ್ದಿಜಾಲ ಅಥಣಿ :
ಜಮೀನಿನ ಸಲುವಾಗಿ ಇಬ್ಬರುಬದಾಯಾದಿಗಳ ಮಧ್ಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗಡಿ ಭಾಗದಲ್ಲಿ ನಡೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿ ಗ್ರಾಮದ ನಿವಾಸಿಗಳಾದ ಹಣಮಂತ ಚಂದ್ರಕಾಂತ ಖೋತ 34, ಖಂಡೋಬಾ ತಾನಾಜಿ ಖೋತ 32 ಮೃತ ಯುವಕರು
ಜಮೀನು ವಿವಾದಲ್ಲಿ ಹೊಡೆದಾಡಿಕೊಂಡು ಸಾವನಪ್ಪಿದ್ದ ದಾಯಾದಿಗಳು, ಮೃತ ಹನಮಂತ ಹಾಗೂ ಖಂಡೋಬಾ ಜಮೀನು ವಿಷಯದಲ್ಲಿ ಹಲವಾರು ದಿನದಿಂದ ವಿವಾದ ನಡೆಯುತ್ತಲೆ ಇತ್ತು. ಕೆಲ ದಿನದ ಹಿಂದೆ ರಾಜಿ ಸಂಧಾನ ಮಾಡಿಸಿದ್ದ ಗ್ರಾಮದ ಹಿರಿಯರು.
ಸೋಮವಾರ ರಾತ್ರಿ ಮಾತಿನ ಚಕಿಮಕಿ ಜೋರಾಗಿ ನಡೆದು ಇಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಇಬ್ಬರು ದಾಯಾದಿಗಳು.
ಇಬ್ಬರಿಗೂ ಗಂಭೀರಗಾಯಗಳಾದ ಹಿನ್ನಲೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಕವಟೆಮಂಕಳ ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಇಬ್ಬರು ಸಾವನಪ್ಪಿದ್ದಾರೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.