ಉ.ಕ ಸುದ್ದಿಜಾಲ ಹುಕ್ಕೇರಿ :
ತೀವ್ರ ಕೂತುಹಲ ಮೂಡಿಸಿರುವ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ನಡುವೆ ಹುಕ್ಕೇರಿ ತಾಲೂಕಿನ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಇದೇ ರವಿವಾರ ಅಕ್ಟೋಬರ್ 19 ರಂದು ನಡೆಯಬೇಕಿದ್ದ ಹುಕ್ಕೇರಿ ತಾಲೂಕಿನ ಚುನಾವಣೆ ಮುಂದುಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು ಆ ಆದೇಶಕ್ಕೆ ಸಧ್ಯ ಬೆಂಗಳೂರು ಹೈ ಕೋರ್ಟ ತಡೆಯಾಜ್ಞೆ ನೀಡಿ ನಾಳೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ.
ರಮೇಶ ಕತ್ತಿ ಪರ ಧಾರವಾಡ ಹೈಕೋರ್ಟ್ ತೀರ್ಪು. ರಮೇಶ ಕತ್ತಿಗೆ ಬಿಗ್ ರಿಲೀಪ್. ಹುಕ್ಕೇರಿ ತಾಲೂಕಿನ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ ಹೈಕೋರ್ಟ್ ಅಸ್ತು. ಇವತ್ತು ನಡೆದ ವಿಚಾರಣೆಯಲ್ಲಿ ನ್ಯಾಯಾಲದಿಂದ ಮಹತ್ವದ ತೀರ್ಪು. ಹುಕ್ಕೇರಿ ಕ್ಷೇತ್ರದ ಚುನಾವಣೆ ಮುಂದೂಡಿ ಧಾರವಾಡ ಹೈಕೋರ್ಟ್ ಆದೇಶದ ಬೆನ್ನಲ್ಲೆ ಹೈಕೋರ್ಟ್‌ನಿಂದ ಮಹತ್ವದ ತೀರ್ಪು.
ತಮ್ಮ ಪರ ತೀರ್ಪು ನೀಡಿದ ಬೆನ್ನಲ್ಲೆ ರಮೇಶ ಕತ್ತಿ ಸಂತಸ. ಚಿಕ್ಕೋಡಿಯಲ್ಲಿ ಮಾಧ್ಯಮಗಳಿಗೆ ಮಾಜಿ ಸಂಸದ ರಮೇಶ ಕತ್ತಿ . ಧರ್ಮಕ್ಕೆ ಜಯವಾಗಿದೆ, ಅಧರ್ಮಿಗಳಿಗೆ ಸೋಲಾಗಿದೆ. ವಿರೋಧಿಗಳು ಮತ್ತೊಮ್ಮೆ ಮಣ್ಣು ಮುಕ್ಕಿದ್ದಾರೆ ಎಂದ ರಮೇಶ ಕತ್ತಿ.
ಧಾರವಾಡ ಹೈಕೋರ್ಟ್‌ನಿಂದ ತಡೆ ನೀಡಲಾಗಿತ್ತು. ಹಿರಿಯರ ಮಾರ್ಗದರ್ಶನದಲ್ಲಿ ಕಾನೂನು ಹೋರಾಟ ಮಾಡಲಾಗಿತ್ತು. ಮೊದಲನೆಯ ಹಂತದಲ್ಲಿ ನಮಗೆ ಗೆಲುವಾಗಿದೆ. ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಯಾರೂ ತೊಂದರೆ ಮಾಡಬಾರದು. ಕೋರ್ಟ್ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಚುನಾವಣೆ ನಡೆಸುವಂತೆ ಆದೇಶ ನೀಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಚುನಾವಣೆ ಜರುಗಿಸಲು ಅವಕಾಶ. ಇದರಿಂದಾಗಿ ನ್ಯಾಯಾಲಯದ ಮೇಲಿನ ವಿಶ್ವಾಸ ಇಮ್ಮುಡಿಯಾಗಿದೆ. ಈ ಆದೇಶದಿಂದಾಗಿ ನಮಗೂ ಆತ್ಮಸ್ಥೈರ್ಯ ಹೆಚ್ಚಾಗಿದೆ. ನಾಳೆ ಎಂದಿನಂತೆ ಹುಕ್ಕೇರಿ ಕ್ಷೇತ್ರದ ಚುನಾವಣೆ ಜರುಗಲಿದೆ.
ನ್ಯಾಯಾಲಯದ ಆದೇಶದಿಂದ ಮಾಜಿ ಸಂಸದ ರಮೇಶ ಕತ್ತಿಗೆ ಬಿಗ್ ರಿಲೀಪ್ ಸಿಕ್ಕಿದೆ. ಧಾರವಾಡ ಪೀಠದ ಹೈ ಕೋರ್ಟ ಆದೇಶದ ಮೇರೆಗೆ ಚುನಾವಣೆ ಮೂಂದುಡಲಾಗಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯ ತ್ವರಿತ ವಿಚಾರಣೆ ನಡೆಸಿ ನಾಳೆ ಚುನಾವಣೆ ನಡೆಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಹುಕ್ಕೇರಿ ಹಾಗೂ ಎಲ್ಲ ತಾಲೂಕುಗಳ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆ ಅಕ್ಟೋಬರ್ 19 ನಾಳೆ ರವಿವಾರ ಜರುಗಲಿದೆ.
ನಾಳೆ ಹುಕ್ಕೇರಿ ಮತಕ್ಷೇತ್ರದ ಪಿಕಿಪಿಎಸ್ ಚುನಾವಣೆ ನಡೆಯಲಿದೆ – ರಮೇಶ ಕತ್ತಿ ಸ್ಪಷ್ಟನೆ
