ಉ.ಕ ಸುದ್ದಿಜಾಲ ಕಾಗವಾಡ :

ಕಳೆದ ಹಲವಾರು ವರ್ಷಗಕಲಿಂದ ಕಾಗವಾಡ ಪ್ರಜಾ ಸೌಧ ನಿರ್ಮಾಣ ಮಾಡಬೇಕೆಂದು ಪ್ರಯತ್ನ ಪಡುತ್ತಿರುವ ಕಾಂಗ್ರೆಸ್ ಕಾಗವಾಡ ಶಾಸಕ ರಾಜು ಕಾಗೆ ಹಲವಾರು ಬಾರಿ ಸಂಬಂಧಪಟ್ಟ ಸಚಿವ ಹಾಗೂ ಅಧಿಕಾರಿಗಳಿಗೆ ಬೇಟಿ ಕೂಡಾ ನೀಡಿದ್ದರು ಈ ಪ್ರಜಾ ಸೌಧದ ಬಗ್ಗೆ ಸದನದಲ್ಲಿ ಧ್ವನಿ ಕೂಡಾ ಎತ್ತಿದ್ದರು.

ಈ ವಿಚಾರವಾಗಿ ಇಂದು ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿಗಳು ಕಂದಾಯ ಸಚಿವರ ನಿರ್ದೇಶನದಂತೆ ಇಂದು ಪ್ರಜಾಸೌಧ ಜಾಗದ ಪರಿಶೀಲನೆ ಮಾಡಲಾಗಿದ್ದು ಸತತ ಮಳೆಯ ಕಾರಣ ಮಣ್ಣು ಪರೀಕ್ಷೆ ನಡೆಸಲು ವಿಳಂಬವಾಗಿದೆ ಮಳೆ ಕಡಿಮೆ ಆದ ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಣ್ಣು ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ವರದಿ ಬಂದ ಬಳಿಕೆ ಕಾಮಗಾರಿಗೆ ಚಾಲನೆ ನೀಡಲಾಗುವುದು.

ಈಗಾಗಲೇ ಪ್ರಜಾಸೌಧ ನಿರ್ಮಾಣಕ್ಕೆ ಸರಕಾರದಿಂದ ಹಣ ಮಂಜುರು ಆಗಿದೆ ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರು ಸ್ಥಳ ಗುರಿತಿಸಿಲು ತಿಳಿಸಿದ್ದು ಅದರಂತೆ ಪ್ರಜಾಸೌಧ ಕಟ್ಟಡಕ್ಕೆ ಯೋಗ್ಯ ಜಾಗದ ವರದಿ ಸಿದ್ದಪಡಿಸಿ ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಸಿದ್ದಪಡಿಸಿ ಎಲ್ಲ ನೂನ್ಯತೆ ಇಟ್ಟುಕೊಂಡು ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ವೇ ನಂ 6ರಲ್ಲಿ ಗುರುತಿಸಿರುವ ಜಾಗ ಯೋಗ್ಯವಾಗಿದ್ದು ಸದ್ಯ ಪಕ್ಕದಲ್ಲೇ ಶಾಲೆ ಹಾಗೂ ಪಶು ಆಸ್ಪತ್ರೆಯ ಕಟ್ಟಡ ಬಹಳ ವರ್ಷಗಳಿಂದ ಇದ್ದು ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು.

ನಾನು ಒಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದು ಕಟ್ಟಡ ನಿರ್ಮಿಸಲು ಯೋಗ್ಯ ಜಾಗವನ್ನು ಗುರುತಿಸಿದ್ದನೆ ಮತ್ತು ಗ್ರಹ ಮಂಡಳಿಗೆ ಕಟ್ಟಡದ ಗುತ್ತಿಗೆ ನೀಡಲಾಗಿದೆ ಆದಷ್ಟು ಬೇಗ ವರದಿ ನೀಡಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ವೇಳೆ ನ್ಯಾಯವಾದಿಗಳ ಸಂಘದ ಸದಸ್ಯರು ನ್ಯಾಯಾಲಯದ ಮಂಜೂರಾದ ಜಾಗದ ಪಹಣಿಯನ್ನು ಹಾಗೂ ಮಳೆಗಾಲದಲ್ಲಿ ನ್ಯಾಯಾಲಯದ ಕಡತಗಳಿಗೆ ಜಾಗದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಆದಷ್ಟು ಬೇಗ ಅದನ್ನು ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಈ ವೇಳೆ ತಹಶಿಲ್ದಾರ ರವೀಂದ್ರ ಹಾದಿಮನಿ, ಉಪ ತಹಶಿಲ್ದಾರ ರಶ್ಮಿ ಜಕಾತಿ, ಅಣ್ಣಾಸಾಬ ಕೋರೆ, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ ಮಗದುಮ್ಮ, ಕಂದಾಯ ನಿರೀಕ್ಷಕ ಮುಲ್ಲಾ,ಪಿಎಸ್ಐ ರಾಘವೇಂದ್ರ ಖೋತ,ಸೇರಿದಂತೆ ಅನೇಕರು ಇದ್ದರು.