ಉ.ಕ‌ ಸುದ್ದಿಜಾಲ ಕಿತ್ತೂರ :

ಕಿತ್ತೂರು ಉತ್ಸವದಲ್ಲಿ ನಿಜಗುಣಾನಂದ ಸ್ವಾಮೀಜಿ ಭಾಷಣ. ಕೇಂದ್ರ ಸರ್ಕಾರ ಇದನ್ನ ಉತ್ಸವ ಮಾಡಿದಾಗ ರಾಷ್ಟ್ರೀಯ ಉತ್ಸವ ಆಗುತ್ತೆ. ಕೇಂದ್ರ ಸರ್ಕಾರ ಇದನ್ನ ಮನಸ್ಸಿಗೆ ತೆಗೆದುಕೊಳ್ಳಬೇಕು. ರಾಜ್ಯ ರಾಜಕಾರಣದಲ್ಲಿರುವ ಇತಿಹಾಸ ತಿಳಿದುಕೊಳ್ಳಬೇಕು. ಕಿತ್ತೂರು ಚನ್ನಮ್ಮ ಉತ್ಸವದ ಪರಿಚಯವನ್ನ ದೆಹಲಿಯಲ್ಲಿ ಪರಿಚಯಿಸಬೇಕು.

ಹಂಪಿ ಉತ್ಸವ ಕಿತ್ತೂರು ಉತ್ಸವದಲ್ಲಿ ಪರಿಚಯಿಸಬೇಕು. ಇತಿಹಾಸಗಳು ವಿನಿಮಯ ಆದಾಗ ಬೆಳೆಯಲು ಸಾಧ್ಯವಾಗುತ್ತೆ. 1824ರಲ್ಲಿ ಸ್ವತಂತ್ರೆಯ ಕಹಳೆ ಊದಿದ ತಾಯಿ ಚನ್ನಮ್ಮ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅನ್ನ ಗುರುತಿಸುತ್ತಾರೆ.

ಇತಿಹಾಸ ಗುರುತಿಸುವ ಕೆಲಸ ಆದಾಗ ರಾಷ್ಟ್ರೀಯ ಉತ್ಸವ ಆಗುತ್ತೆ. ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವ ಆಗಲಿ ಅಂತಾ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲಿ. ಸರ್ಕಾರ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಿತು. ಹಿಂದು ರಾಷ್ಟ್ರ ಕಟ್ಟಬೇಕು ಅಂತಾ ಆಸೆ ಇದ್ದ ಶಿವಾಜಿ ಅವರಿಗೆ ಆಶ್ರಯ ಕೊಟ್ಟವರು ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮ.

ಗ್ರಾಮೀಣ ಹೆಣ್ಣು ಮಕ್ಕಳಿಗಾಗಿ ಚನ್ನಮ್ಮನ ಹೆಸರಿನಲ್ಲಿ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜು ತರಬೇಕು. ಸಚಿವ ಸತೀಶ್ ಜಾರಕಿಹೊಳಿ‌ ಅವರಿಗೆ ಮನವಿ ಮಾಡಿದ ಸ್ವಾಮೀಜಿ ಕರ್ನಾಟಕದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಸವಣ್ಣನವರ ಫೋಟೊ ತರಬೇಕು.