ಉ.ಕ‌ ಸುದ್ದಿಜಾಲ ಮಹಾರಾಷ್ಟ್ರ :

ಕೈ ಹಿಡಿದು ನೋವು ಆಲಿಸಬೇಕಿದ್ದ ಗಂಡ ಚಿತೆಯ ಮೇಲೆ ಮಲಗಿದ್ದ.‌ಕಣ್ಣು ಬಿಡದ ಹೆಣ್ಣು ಮಗಳ ಜೊತೆ ಪತ್ನಿ ಗಂಡನ ಅಂತಿಮ‌ ಸಂಸ್ಕಾರಕ್ಕೆ ಬಂದಳು. ಈ ದೃಶ್ಯ ಕರುಳು ಹಿಂಡುವಂತಿತ್ತು. ಜಗತ್ತಿನ ಅರಿವು ಇಲ್ಲದ ನವಜಾತ ಶಿಶು ಯಾವ ಪಾಪ ಮಾಡಿತ್ತು ದೇವರೇ ಬಲ್ಲ…!

ಇದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾರ್ಲಿಯಲ್ಲಿ ನಡೆದ ಘಟನೆ. ಭಾರತೀಯ ಸೇನೆಯಲ್ಲಿದ್ದ ಪ್ರಮೋದ್ ಜಾಧವ್ ಎಂಬುವವರು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಇತ್ತ ತುಂಬು ಗರ್ಭಿಣಿ ಪತ್ನಿ ಆಸ್ಪತ್ರೆಗೆ ಸೇರಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಕುಟುಂಬ ಇತ್ತು.

ಆದರೆ ದುರಾದೃಷ್ಟವಶಾತ್ ಸೈನಿಕ ಪ್ರಮೋದ್ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದಾರೆ. ಪ್ರಮೋದ್ ತೀರಿಹೋದ ಕೆಲವೇ ಗಂಟೆಯಲ್ಲಿ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.