ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ-ಮಿರಾಜ್ ಪ್ಯಾಸೆಂಜರ್ ರೈಲನ್ನು ಕಾಯಂಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಇದು ರೈತರು, ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ.
ಇದರ ಜತೆಗೆ ಅಕ್ಟೋಬರ್ 5 ರಂದು ಬೆಂಗಳೂರಿನಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಬೀದರ್‌ನಿಂದ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಳಗಾವಿ ಜನರಿಗೆ ಗುಡ್‌ನ್ಯೂಸ್. ಕರ್ನಾಟಕ – ಮಹಾರಾಷ್ಟ್ರದ 2 ಪ್ರಮುಖ ನಗರಗಳನ್ನು ಸಂಪರ್ಕಿಸು ರೈಲು ಕಾಯಂಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಖಾತೆ ಸಹಾಯ ಸಚಿವ ವಿ ಸೋಮಣ್ಣ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ” ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಈ ಹಿಂದೆ ವಿಶೇಷ ಸೇವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮಿರಾಜ್ ಪ್ಯಾಸೆಂಜರ್ ರೈಲನ್ನು ಈಗ ಕಾಯಂಗೊಳಿಸಲಾಗಿದೆ ” ಎಂದು ತಿಳಿಸಿದ್ದಾರೆ.
ಈ ಮೂಲಕ ವರ್ಷವಿಡೀ ಈ ರೈಲು ನಿತ್ಯ ಸಂಚಾರ ನಡೆಸಲಿದೆ. ವಿಶೇಷ ಈಗ ಕಾಯಂ ರೈಲಾದ ಹಿನ್ನೆಲೆ ದರದಲ್ಲಿಯೂ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ರೈಲ್ವೆ ಇಲಾಖೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಗಡಿ ಭಾಗದ ಜನರಿಗೆ ಗುಡ್ ನ್ಯೂಸ್ – ಬೆಳಗಾವಿ – ಮಿರಾಜ್ ಪ್ಯಾಸೆಂಜರ್ ರೈಲನ್ನು ಕಾಯಂ – ವಿ ಸೋಮಣ್ಣ
