ಉ. ಕ ಸುದ್ದಿಜಾಲ ಸವದತ್ತಿ :

ವರದಿ : ಶ್ರೀನಿವಾಸ ಲಮಾಣಿ

ಬೆಳಗಾವಿ ಜಿಲ್ಲೆಯ ಸುಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಸವದತ್ತಿ ತಾಲೂಕಿನ ಸುಪ್ರಸಿದ್ಧ ಯಲ್ಲಮ್ಮ ದೇವಾಲಯ ಕೋರೊನಾ ಮೂರನೇ ಅಲೆಗೆ ತುತ್ತಾಗಿ ಮತ್ತೆ ಸಾರ್ವಜನಿಕ ದರ್ಶನ ನಿರ್ಬಂಧಕ್ಕೆ ಒಳಗಾಗಿದೆ. ಹಾಗಾಗಿ ಒಮ್ಮಿಂದೊಮ್ಮೆಲೆ ದೇವಸ್ಥಾನ ಬಂದ ಆಗಿದ್ದರಿಂದ ಸ್ಥಳಿಯ ಬೀದಿ ಬದಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ದೇವಸ್ಥಾನ ಎರಡನೇ ಅಲೆ ನಂತರ ಪ್ರಾರಂಭವಾಗಿ, 2021ರ ಅಕ್ಟೋಬರ್‌ ನಿಂದ ಮೂರೆ ತಿಂಗಳಿನಲ್ಲಿ ಮತ್ತೆ‌ ಬಂದ್ ಆಗಿದ್ದರಿಂದ ವ್ಯಾಪಾರಸ್ಥರು ಮತ್ತೆ ಬಿದಿಗೆ ಬರುವಂತಾಗಿದೆ. ಯಲ್ಲಮ್ಮ ದೇವಸ್ಥಾನವನ್ನು ನಂಬಿ ಸುತ್ತಮುತ್ತಲಿನ ಊರಿನ ಜನ ತಮ್ಮ ಹೂಟ್ಟೆ ಪಾಡಿಗಾಗಿ ಅಲ್ಲಿ ವ್ಯಾಪಾರ ಮಾಡಲು ತಾತ್ಕಾಲಿಕ ಅಂಗಡಿಗಳನ್ನು ಹಾಕಿ ಸಾವಿರಾರು ರೂಪಾಯಿಯ ಹೂಡಿಕೆ ಮಾಡಿ ಕುಂಕುಮ ಬಂಢಾರ, ಆಟಿಕೆ ಸಾಮಾನು, ಹೋಟೆಲ್, ಬಿದಿಬದಿ ವ್ಯಾಪಾರ ನಡೆಸಲು ಪ್ರಾರಂಭಿಸಿ ಇನ್ನೇನು ಆರ್ಥಿಕವಾಗಿ ಸುಧಾರಣೆ ಕಾಣುತ್ತೆವೆ ಅಂದುಕೊಂಡಿದ್ದರು,

ಆದರೆ ಮತ್ತೆ ದೇವಸ್ಥಾನ ಬಂದ್ ಆಗಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾವಿರಾರು ರೂಪಾಯಿ ಹೂಡಿಕೆ ಮಾಡಿ ಎಲ್ಲ ವ್ಯಾಪಾರಸ್ಥರು ಅಲ್ಲಿ ವ್ಯವಸ್ಥಾಪನಾ ಸಮಿತಿಗೆ ಹಿಡಿ ಶಾಪ ಹಾಕಿತ್ತಿದ್ದಾರೆ. ಇವತ್ತು ಶುಕ್ರವಾರ ನಿಮಿತ್ಯ ಸಾವಿರಾರು ಭಕ್ತಾದಿಗಳು ಯಲ್ಲಮ್ಮ ಗುಡ್ಡಕ್ಕೆ ನಿನ್ನೆಯೆ ಆಗಮಿಸಿದ್ದರು ಒಮ್ಮೆಲೆ ದೇವಸ್ಥಾನ ಬಂದ ಆಗಿದ್ದರಿಂದ ಬಂದವರು ನೀರು ಸಹ ಸಿಗದೇ ಮರಳಿ ಊರಿಗೆ ಹೋಗುವಂತಾಗಿದೆ.