ಪತ್ನಿ ಸಾವಿನಿಂದ ಮನನೊಂದಿದ್ದ ವ್ಯಕ್ತಿಯೊಬ್ಬ ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಒಂದೇ ಕುಟುಬದ ಐದು ಜನರು ಸಾವನಪ್ಪಿರುವ ವಿದ್ರಾವಕ ಘಟನೆಯೊಂದು ನಡೆದಿದ್ದು ಕುಟುಂಬಸ್ಥರ, ಸಂಭಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೋರಗಲ್ ಗ್ರಾಮದ ಗೋಪಾಲ ಹಾದಿಮನಿ (46) ಹಾಗೂ ಅವರ ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನಾ ಹಾದಿಮನಿ (8) ಆತ್ಮಹತ್ಯೆಗೆ ಶರಣಾದವರು. ಗೋಪಾಲ ಹಾದಿ ಮನಿ ನಿವೃತ್ತ ಯೋಧರು. ಜುಲೈ 6 ರಂದ ಗೋಪಾಲ ಅವರ ಪತ್ನಿ ಜಯಾ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಮೃತಪಟ್ಟಿದ್ದರು. ಪತ್ನಿಯ ಮೇಲೆ ಅತಿಯಾದ ಪ್ರೀತಿಯನ್ನ ಹೊಂದಿದ್ದ ಅವರು ಅವರ ನಿಧನದಿಂದ ಮನೆಯಲ್ಲಿ ಉಲ್ಲಾಸ, ಉತ್ಸಾಹ ಕಳೆದುಕೊಂಡ ಮನೆಯವರು, ಜಯಾ ಅವರ ನೆನಪಿನಲ್ಲಿಯೇ ಕಳೆದ ದಸರಾ ಹಬ್ಬ ಕಳೆದಿದ್ದಾರೆ. ನಮ್ಮ ಮನೆಯ ದೀಪ ಆರಿತೆಂದು ಹಲವಾರು ಬಾರಿ ಗೋಪಾಲ್ ಅವರು ಊರಲ್ಲಿ ಹೇಳಿಕೊಂಡಿದ್ದಾರಂತೆ ಅವರ ಪತ್ನಿ ಜಯಾ ಸಾವಿನ ನೋವಿನಿಂದ ಇಂದು ಕುಟುಂಬದ ಐದು ಜನ ಆತ್ಮಹತ್ಯೆಗೆ ಶರಣಾಗಿದ್ದು ಸ್ಥಳೀಯರ ಹಾಗೂ ಸಂಭಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.