ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಯುವಕನನ್ನ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ನಡೆದ ಘಟನೆ. ಬಸ್ ಇಳಿದು ಮನೆ ತಲುಪುವಷ್ಟರಲ್ಲಿ ದುಷ್ಕರ್ಮಿಗಳಿಂದ ಮಚ್ಚಿನಿಂದ ಇರಿದು ಕೊಲೆ.

ಮಹಾಂತೇಶ ಬುಕನಟ್ಟಿ (24) ಕೊಲೆಯಾದ ಯುವಕ. ಮನೆ ಸೇರಬೇಕಿದ್ದ ಯುವಕನನ್ನ ನಡುರಸ್ತೆಯಲ್ಲೆ ಭೀಕರ ಕೊಲೆ ಮಾಡಿದ ಕಿರಾತಕರು. ಕೊಲೆ ಮಾಡಿ ಸ್ಥಳದಲ್ಲೆ ಮಚ್ಚು ಬಿಟ್ಟು ಪರಾರಿಯಾದ ದುಷ್ಕರ್ಮಿಗಳು.

ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ಪರಿಶೀಲನೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.