ಉ.ಕ ಸುದ್ದಿಜಾಲ ಅಥಣಿ :
ರಕ್ತದಾನ ಇದು ಶ್ರೇಷ್ಠದಾನ “ಮಾನವ ಕುಲದ ಸೇವೆಯೇ, ಜೀವನದ ಅತ್ಯುತ್ತಮ ಕಾರ್ಯ. ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ, ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ ಹಾಗೂ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥಣಿ,ಪ್ರಾಥಮಿಕ ಆರೋಗ್ಯ ಕೇಂದ್ರ ಸಂಬರಗಿ,
ರಕ್ತ ಭಂಡಾರ ಬೀಮ್ಸ್ ಆಸ್ಪತ್ರೆ ಬೆಳಗಾವಿ ಮತ್ತು ಗ್ರಾಮ ಪಂಚಾಯತ, ಸಂಬರಗಿ ಇವರ ಸಹಯೋಗದೊಂದಿಗೆ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ವನ್ನು ಸಂಬರಗಿ ಗ್ರಾಮದ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಆಗಮಿಸಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸಲಾಗಿದೆ.
*ರಕ್ತದಾನ ಕುರಿತು ಉಪಯುಕ್ತ ಒಂದಿಷ್ಟು ಮಾಹಿತಿ :-*
* ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದು, ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗುತ್ತಾರೆ.
* ನಮ್ಮ ರಾಜ್ಯದಲ್ಲಿ ದಿನಕ್ಕೆ ಅಂದಾಜು 800 ರಿಂದ 1100 ಯೂನಿಟ್‌ಗಳಷ್ಟು ರಕ್ತದ ಬೇಡಿಕೆ ಇದ್ದು, ಆದರೆ ಪ್ರತಿಶತ 80% ರಕ್ತ ಮಾತ್ರ ಪೂರೈಕೆಯಾಗುತ್ತಿದ್ದು, ಅದಕ್ಕೋಸ್ಕರ ತುರ್ತು ಸಂದರ್ಭಗಳಲ್ಲಿ ಜನರ ಜೀವವನ್ನು ಉಳಿಸಲು ತುಂಬಾ ಉಪಯುಕ್ತ.
ರಸ್ತೆ ಅಪಘಾತ, ಶಸ್ತ್ರ ಚಿಕಿತ್ಸೆ ಹಾಗೂ ಹೆರಿಗೆ ಇನ್ನೂ ಮುಂತಾದ ಸಂದರ್ಭಗಳಲ್ಲಿ ರಕ್ತ ಸ್ರಾವವಾದರೆ ರೋಗಿಯ ಪ್ರಾಣಕ್ಕೆ ಕುತ್ತು ಬಂದಾಗಲೇ ರಕ್ತದಾನ ಮಾಡಿದವರ ರಕ್ತವನ್ನು ರೋಗಿಗೆ ನೀಡಿದರೆ, ಆ ರೋಗಿಯ ಜೀವವನ್ನು ಉಳಿಸಿದಂತಾಗುತ್ತದೆ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರನಷ್ಟು ರಕ್ತವಿರುತ್ತದೆ. ರಕ್ತದಾನದ ಸಮಯದಲ್ಲಿ ಕೇವಲ 300 ಮಿಲಿ ರಕ್ತವನ್ನು ಅಷ್ಟೇ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ನಾವು ತೆಗೆದುಕೊಂಡ 300 ಮಿಲಿ ರಕ್ತವು ಪುನಃ ಒಂದೇ ದಿನದಲ್ಲಿ ಉತ್ಪತ್ತಿಯಾಗುತ್ತದೆ.
18 ರಿಂದ 55 ವರ್ಷದವರೆಗಿನ ಎಲ್ಲರೂ ರಕ್ತವನ್ನು ದಾನ ಮಾಡಬಹುದು. ಹಾಗೆಯೇ 3 ತಿಂಗಳಿಗೊಮ್ಮೆ ತಾವುಗಳು ರಕ್ತದಾನ ಮಾಡಬಹುದು. ಬ್ಲಡ್ ಬ್ಯಾಂಕ್ ಎಂದರೆ ಯಾವುದೇ ಸಂದರ್ಭದಲ್ಲಿ ರೋಗಿಗೆ ರಕ್ತವನ್ನು ಪೂರೈಸಬೇಕಾಗುತ್ತದೆ, ಆಗ ತಕ್ಷಣವೇ ರೋಗಿಗೆ ಸಿಗುವುದು ಒಂದೇ ಕಡೆ ಅದು ದಾನಿಗಳಿಂದ ಪಡೆದಂತಹ ರಕ್ತವು ಬ್ಲಡ್ ಬ್ಯಾಂಕ್‌ನಲ್ಲಿ ಶೇಖರಿಸಿ ಇಡಲಾಗುತ್ತದೆ. ಅದನ್ನೇ ರೋಗಿಗೆ ಪೂರೈಸಲಾಗುತ್ತದೆ. ರಕ್ತದಾನ ಇದು ಶ್ರೇಷ್ಠ ದಾನ “ಮಾನವ ಕುಲದ ಸೇವೆಯೇ, ಜೀವನದ ಅತ್ಯುತ್ತಮ ಕಾರ್ಯ”
ಗಮನಿಸಿ,..ರಕ್ತದ ಉಡುಗೊರೆ, ಜೀವನದ ಉಡುಗೊರೆ”
ಧನ್ಯವಾದಗಳು…
ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ, ಸಂಬರಗಿ ತಾ॥ ಅಥಣಿ, ಜಿ| ಬೆಳಗಾವಿ – 9741273195
ರಕ್ತದಾನ ಮಾಡಿ ಜೀವ ಉಳಿಸಿ ಸ್ಥಳ : ಹನುಮಾನ ಮಂದಿರ ಸಂಬರಗಿ ತಾ॥ ಅಥಣಿ, ಜಿ|| ಬೆಳಗಾವಿ
ಶುಕ್ರವಾರ, ದಿನಾಂಕ: 15-10-2025, ಬೆಳಗ್ಗೆ. 10 ರಿಂದ ಮದ್ಯಾಹ್ನ 2.00 ರವರೆಗೆ
ಮಾನವ ಕುಲದ ಸೇವೆಯೇ, ಜೀವನದ ಅತ್ಯುತ್ತಮ ಕಾರ್ಯ. ಅ.15ಕ್ಕೆ ಸಂಬರಗಿ ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
