ಉ.ಕ‌ ಸುದ್ದಿಜಾಲ ಧಾರವಾಡ :

ರಂಗಕರ್ಮಿ ರಾಜು ತಾಳಿಕೋಟಿ ನಿಧನ ಹಿನ್ನೆಲೆ, ನಾಳೆ ಬೆಳಿಗ್ಗೆ ಧಾರವಾಡಕ್ಕೆ ಆಗಮಿಸಲಿರುವ ಪಾರ್ಥಿವ ಶರೀರ ಬೆಳಿಗ್ಗೆ 7 ಗಂಟೆಗೆ ರಂಗಾಯಣ ಆವರಣಕ್ಕೆ ಆಗಮನ ಉಡುಪಿಯಿಂದ ನೇರವಾಗಿ ಧಾರವಾಡಕ್ಕೆ ಪಾರ್ಥಿವ ಶರೀರ ತರಲಿರುವ ಕುಟುಂಬಸ್ಥರು. ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ.

ಅಂತಿಮ ದರ್ಶನದ ಬಳಿಕ ಹುಟ್ಟೂರಿಗೆ ತೆಗೆದುಕೊಂಡು ಹೋಗಲಿರುವ ಕುಟುಂಬಸ್ಥರು ಒಂದು ಗಂಟೆಯ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅನುವು

ಧಾರವಾಡದಲ್ಲಿ ಪ್ರಭು ಹಂಚಿನಾಳ ಹೇಳಿಕೆ ಪ್ರಭು, ರಂಗಕರ್ಮಿ ಹಾಗೂ ರಾಜು ತಾಳಿಕೋಟಿ ಅವರ ಆಪ್ತ ಅವರ ಸಾವು ಕೇವಲ ಉತ್ತರ ಕರ್ನಾಟಕಕ್ಕಷ್ಟೇ ನಷ್ಟವಲ್ಲ ಬದಲಿಗೆ ಇಡೀ ರಾಜ್ಯಕ್ಕೆ ಆದ ನಷ್ಟ.

ಉಡುಪಿಯ ಹೆಬ್ರಿಯಲ್ಲಿ ಶಂಕರಾಭರಣ ಅನ್ನೋ ಚಿತ್ರದ ಶೂಟಿಂಗ್ ನಡೆದಿತ್ತು. ನಿನ್ನೆ ಅವರಿಗೆ ಎದೆ ನೋವು ಶುರುವಾಗಿತ್ತು. ನಿನ್ನೆಯಷ್ಟೇ ತಮಗೆ ಎದೆ ನೋವಾಗಿದ್ದರ ಬಗ್ಗೆ ನನ್ನೊಡನೆ ಮಾತನಾಡಿದ್ದರು ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಕಲಿಯುಗದ ಕುಡುಕ ಅನ್ನೋ ನಾಟಕದ ಮೂಲಕ ಹೆಸರು ಮಾಡಿದ್ದರು. ಅದಾದ ಬಳಿಕ ಯೋಗರಾಜ ಭಟ್ಟರ ಸಿನೆಮಾಗಳಲ್ಲಿ ನಟಿಸಿದ್ದರು ಸುಮಾರು 60-70 ಸಿನೆಮಾಗಳಲ್ಲಿ ನಟಿಸಿದ್ದರು. ಧಾರವಾಡದಲ್ಲಿ ನನ್ನ ಮನೆಯ ಹಿಂಭಾಗದಲ್ಲಿಯೇ ಬಾಡಿಗೆ ಮನೆ ಕೊಡಿಸಿದ್ದೆ.

ಬಡತನದಿಂದಲೇ ಈ ಮಟ್ಟಕ್ಕೆ ಬಂದವರು ಶರಣ ಸಂಸ್ಕೃತಿಯನ್ನು ಹೊಂದಿದ್ದ ಮಹಾನ್ ಚೇತನ ಮುಸ್ಲಿಂ ಆಗಿದ್ದರೂ ಬಸವಣ್ಣನ ನಾಟಕ ಮಾಡಿದರು. ಅವರು ಯಾರಿಗೂ ಅನ್ಯಾಯ ಮಾಡಿದವರಲ್ಲ.

ಸಾಕಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ ಆಗಸ್ಟ್. 16, 2024 ಕ್ಕೆ ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದರು. ಇದೇ ಅಕ್ಟೋಬರ್ 28 ಕ್ಕೆ ಅವರ 61 ನೇ ಹುಟ್ಟಿದ ಹಬ್ಬವಿತ್ತು. ಅದನ್ನು ಗ್ರ್ಯಾಂಡ್ ಆಗಿ ಮಾಡೋದಾಗಿ ಹೇಳಿದ್ದರು.



ಅವರಿಗೆ ಮೂರು ಜನ ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ ಅವರಿಗೆ ರಂಗಾಯಣದಲ್ಲಿ ಕೆಲವು ನಾಟಕ ಮಾಡಬೇಕೆನ್ನೋ ಮನಸ್ಸಿತ್ತು. ನನಗೆ ರಂಗಭೂಮಿಯೇ ಎಲ್ಲವನ್ನು ನೀಡಿದೆ. ನನಗೆ ಯಾವ ಆಸೆಯೂ ಇಲ್ಲ ಅನ್ನುತ್ತಿದ್ದರು.

ಉತ್ತರ ಕರ್ನಾಟಕದ ಭಾಷೆಯನ್ನು ಇವರಷ್ಟು ಸಮರ್ಥವಾಗಿ ಮಾತನಾಡುವವರು ಯಾರೂ ಇರಲಿಲ್ಲ. ಅವರ ನಿಧನದಿಂದ ರಂಗಭೂಮಿ ಬಡವಾಗಿದೆ.