ಚಿಕ್ಕಮಗಳೂರು :

ರಾಜಕೀಯ ಅಸ್ವಿತ್ವ ಕೊಟ್ಟ ದೇವೇಗೌಡರಿಗೆ ಸಿದ್ದು ಕ್ಷಮೆ ಕೇಳಲಿ, ನಾನು ತಪ್ಪು ಮಾಡಿದರೆ ಕ್ಷಮೆ ಕೇಳುತ್ತೇನೆ ಕರ್ನಾಟಕದಿಂದ ಹೊರಗೆ ಸಿದ್ದರಾಮಯ್ಯನವರನ್ನ ಗುರುತಿಸೋರ್ಯಾರು…? ಜಗತ್ತಿನ ಬಹತೇಕ ದೇಶಗಳಲ್ಲಿ ಮೋದಿಯನ್ನ ಆತ್ಮೀಯವಾಗಿ ಸ್ವಾಗತಿಸ್ತಾರೆ. 14 ದೇಶ ತಮ್ಮ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನ ಮೋದಿಗೆ ಕೊಟ್ಟಿದ್ದಾರೆ, ಸಿದ್ದರಾಮಯ್ಯಗೆ ಕೊಟ್ಟಿದ್ದಾರಾ ಎಂದು ಸಿ ಟಿ ರವಿ ಪ್ರಶ್ನೆ ಮಾಡಿದ್ದಾರೆ.

C T RAVI

ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. 14 ದೇಶ ತಮ್ಮ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನ ಮೋದಿಗೆ ಕೊಟ್ಟಿದ್ದಾರೆ. ಅಂತಹಾ ಪ್ರಧಾನಿ ಬಗ್ಗೆ ಹೆಬ್ಬೆಟ್ಟು ಅಂತ ಹೇಳೋರ್ದು ಸಂಸ್ಕøತಿನಾ…? ‌ಕಂಬಳಿ ಹೊದಿಯೋದು ಜಾತಿಗೆ ಕಾರಣ ಅನ್ನೋದಾದ್ರೆ, ಟೋಪಿ ಹಾಕೋಕು ಜಾತಿ ಇರಬೇಕಲ್ವಾ ಎಂದಿದ್ದೆ. ನಾನು ಆರೋಪ ಮಾಡಿಲ್ಲ, ಸಿದ್ದರಾಮಯ್ಯ ಭಾವಿಸಿರುವಂತೆ ಎಂದು ಹೇಳಿ, ಹೇಳಿಕೆ ನೀಡಿದ್ದೆ  ನಾನು ಕುರುಬ ಸಮುದಾಯದ ಬಗ್ಗೆ ಮಾತನಾಡಿಲ್ಲ, ಕುರುಬರು ನನ್ನ ಜೊತೆಯೇ ಇದ್ದಾರೆ.

ಕುರುಬರು ನಂಬಿಕಸ್ಥರು, ರಾಯಣ್ಣ, ಕನಕದಾಸರ ಬಗ್ಗೆ ನಂಬಿಕೆ ಇರೋರು ಹಿಂದುತ್ವದ ಬಗ್ಗೆಯೂ ನಂಬಿಕೆ ಇಟ್ಟಿರುತ್ತಾರೆ. ಕಾಂಗ್ರೆಸ್ ಕರೆದರೆ ಯಾರೂ ಬರಲ್ಲ ಎಂಬ ಕಾರಣಕ್ಕೆ ಜಾತಿಯನ್ನ ಮುಂದಿಟ್ಟಿದ್ದಾರೆ. ಮೋದಿ, ಯಡಿಯೂರಪ್ಪ, ಈಶ್ವರಪ್ಪ, ಬೊಮ್ಮಾಯಿ, ದೇವೇಗೌಡರಿಗೆ ಸಿದ್ದರಾಮಯ್ಯ ಕ್ಷಮೆ ಕೇಳಲಿ. ನನ್ನದು ತಪ್ಪಾಗಿದ್ರೆ ಕ್ಷಮೆ ಕೇಳೋಕೆ ನನಗೆ ಯಾವ ಸಂಕೋಚವಿಲ್ಲ ಎಂದರು.