ಉ.ಕ ಸುದ್ದಿಜಾಲ ಚಿಕ್ಕಮಗಳೂರು :

ಸಂಸಾರದಲ್ಲಿ ಕಲಹ, ಪತ್ನಿಯನ್ನ ಭೀಕರವಾಗಿ ಕೊಚ್ಚಿ ಕೊಂದ ಪತಿ, ಮನೆಯ ರೂಮಿನ ತುಂಬಾ ಚೆಲ್ಲಿರೋ ರಕ್ತ, ರಕ್ತದ ಮಡುವಿನಲ್ಲಿ ಬಿದ್ದಿರೋ ಮಡದಿ ತನು (25) ಗಂಡನಿಂದ ಭೀಕರವಾಗಿ ಕೊಲೆಯಾದ ಮಹಿಳೆ.

ಚಿಕ್ಕಬಳ್ಳಾಪೂರ ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಘಟನೆ ರಮೇಶ್ ಪತ್ನಿಯನ್ನ ಕ್ರೂರವಾಗಿ ಕೊಚ್ಚಿ ಕೊಂದ ಪತಿ ಗಂಡನ ಜೊತೆ ಜಗಳವಾಗಿ 2 ವರ್ಷದಿಂದ ಪ್ರತ್ಯೇಕವಾಗಿ ವಾಸವಿದ್ದ ಮೃತ ತನು

7 ವರ್ಷದ ಹಿಂದೆ ಮದುವೆಯಾಗಿದ್ದು, 6 ವರ್ಷದ ಗಂಡು ಮಗುವಿದೆ. ನಿನ್ನೆ ರಾತ್ರಿ ಕುಡಿದು ಬಂದು ಪತ್ನಿಯನ್ನ ಕ್ರೂರವಾಗಿ ಕೊಚ್ಚಿದ ಪತಿ ರಮೇಶ್ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು