ಉ.ಕ ಸುದ್ದಿಜಾಲ ಬಬಲೇಶ್ವರ :
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಮಾತನಾಡುವ ಭರದಲ್ಲಿ ಕೊಲ್ಲಾಪುರದ ಕನ್ನೇರಿ ಶ್ರೀಗಳು ಲಿಂಗಾಯತ ಶ್ರೀಗಳ ಕುರಿತು ಆಡಿದ ಕೆಲ ಮಾತುಗಳು ಭಾರೀ ವಿವಾದ ಸೃಷ್ಠಿ ಮಾಡಿತ್ತು. ಬಳಿಕ ಸಪ್ಟೆಂಬರ್ 16 ರಂದು ವಿಜಯಪುರ ಜಿಲ್ಲಾಡಳಿತ ಕನ್ನೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
ಕಳೆದ ಡಿಸೆಂಬರ್ 14 ರಂದು ಕನ್ನೇರಿ ಶ್ರೀಗಳ ನಿರ್ಬಂಧ ಅವಧಿ ಮುಗಿದಿರೋ ಬೆನ್ನಲ್ಲೆ ಈಗ ಭಕ್ತರು ಅದ್ದೂರಿಯಾಗಿ ಕನ್ನೇರಿ ಶ್ರೀಗಳನ್ನ ವಿಜಯಪುರ ಜಿಲ್ಲೆಗೆ ಸ್ವಾಗತ ಮಾಡಿಕೊಂಡಿದ್ದಾರೆ. ಸಚಿವ ಎಂ ಬಿ ಪಾಟೀಲ್ ಮತಕ್ಷೇತ್ರ ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶದ ಮೂಲಕ ಶ್ರೀಗಳನ್ನ ವಿಜಯಪುರ ಜಿಲ್ಲೆಗೆ ಭಕ್ತ ಬಳಗ ಸ್ವಾಗತಿಸಿಕೊಂಡಿದೆ.
ಕನ್ನೇರಿ ಶ್ರೀಗಳು ಜಿಲ್ಲಾ ಪ್ರವೇಶ ಮಾಡುತ್ತಿದ್ದಂತೆ ಭಕ್ತರು ಶ್ರೀಗಳ ಮೇಲೆ ಹೂಮಳೆಗರೆದು ಸ್ವಾಗತಿಸಿಕೊಂಡರು. ಗಾಂಧಿ ಸರ್ಕಲ್ದಿಂದ ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿರೋ ಶಾರದಾ ಶಾಲೆಯವರೆಗೆ ಕುಂಭಮೇಳದೊಂದಿಗೆ ಮೆರವಣಿಗೆ ನಡೀತು.
ಸಮಾವೇಶದ ವೇದಿಕೆಯಲ್ಲಿ ಕನ್ಹೇರಿ ಶ್ರೀಗಳು ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡಿರೋದಕ್ಕೆ ಸ್ಪಷ್ಟನೆ ನೀಡಿದ್ರು.ಬಸವಾದಿ ಶರಣರು ಹಿಂದೂಗಳು, ಹಿಂದೂ ಧರ್ಮ ಹಾಗೂ ಧರ್ಮ ಪ್ರತ್ಯೇಕ ಮಾಡುವವರ ವಿರುದ್ಧ ನಮ್ಮ ದನಿಯೆಂದ್ರು
ಲಿಂಗಾಯತ ಸ್ವಾಮೀಜಿಗಳಿಗೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದರು ಎನ್ನುವ ಕಾರಣಕ್ಕೆ ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ನಿರ್ಬಂಧ ತೆರವಾಗಿದ್ದು, ಭಕ್ತರು ಕನ್ನೇರಿ ಶ್ರೀಗಳನ್ನ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ವಿಶೇಷ ಎಂದರೆ ಸಚಿವ ಎಂ ಬಿ ಪಾಟೀಲ್ ಕ್ಷೇತ್ರದ ಮೂಲಕವೇ ಕನ್ನೇರಿ ಶ್ರೀ ಎಂಟ್ರಿ ಹೊಡೆದಿದ್ದಾರೆ..
ಅದ್ದೂರಿ ಮೆರವಣಿಗೆ ಬಳಿಕ ಶಾರದಾ ಶಾಲೆಯ ಪಕ್ಕದ ಜಾಗದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ 200 ಕ್ಕೂ ಅಧಿಕ ಮಠಾಧೀಶರು, ಸ್ವಾಮೀಜಿಗಳು, ಮಾತಾಜಿಗಳು ಭಾಗಿಯಾದ್ರು. ಶಂಖನಾದದ ಜೊತೆಗೆ ಮಡಿಕೆಗೆ ಕಾಳು ತುಂಬಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ್ರು.
ಮಾಜಿ ಡಿಸಿಎಂ ಈಶ್ವರಪ್ಪ, ಶಾಸಕಿ ಶಶಿಕಲಾ ಜೊಲ್ಲೆ ದಂಪತಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಆದ್ರೆ ಇತ್ತ ಬಸವಾದಿ ಶರಣರ ಹಿಂದೂ ಸಮಾವೇಶದ ಆರಂಭಕ್ಕೂ ಮುನ್ನವೇ ಕೆಲ ಲಿಂಗಾಯತ ಸ್ವಾಮೀಜಿಗಳು ಅಪಸ್ವರ ಎತ್ತಿದ ಘಟನೆಯೂ ನಡೆಯಿತು. ಮಮದಾಪುರ ಅಭಿನವ ಮುರುಘೇಂದ್ರ ಶ್ರೀ, ಮಸಬಿನಾಳ ಸಿದ್ದರಾಮ ಶ್ರೀ, ಗುನದಾಳ ವಿವೇಕಾನಂದ ಶ್ರೀ ಸಮಾವೇಶದ ಕುರಿತು ಆಕ್ಷೇಪ ಹೊರಹಾಕಿದ್ರು.
ಕನ್ನೇರಿ ಶ್ರೀಗಳು ಲಿಂಗಾಯತ ಶ್ರೀಗಳ ಕುರಿತು ಆಡಿದ ಮಾತುಗಳನ್ನ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ರು. ಸಮಾವೇಶದಲ್ಲಿ ಪಾಲ್ಗೊಳ್ಳುವ ಬೇರೆ ಸ್ವಾಮೀಜಿಗಳು ಯೋಚಿಸಿ ಪಾಲ್ಗೊಳ್ಳಿ ಎನ್ನುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದರು. ಇನ್ನು ಸಮಾವೇಶಕ್ಕೆ ಸಾಥ್ ನೀಡಿದವರು ಬಿಜೆಪಿಗರು. ಹೀಗಾಗಿ ಮುಂಬರುವ ಚುನಾವಣೆಗೆ ಸ್ಪರ್ಧಿಸ್ತೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಕನ್ಹೇರಿ ಶ್ರೀಗಳು ಪ್ರತಿಕ್ರಿಯಿಸಿದ್ದು, ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು,
ಆದ್ರೆ ಸಮಾವೇಶದಲ್ಲಿ ಭಕ್ತರು ಮುಂಬರುವ ಚುನಾವಣೆಗೆ ಕನ್ಹೇರಿ ಶ್ರೀಗಳನ್ನು ಮುಖ್ಯಮಂತ್ರಿ ಅಂತ ಘೋಷಿಸಿ ಎಂದು ಪೋಸ್ಟರ್ ಹಿಡಿದು ಘೋಷಣೆ ಕೂಗಿದ್ರು. ವೇದಿಕೆಯಲ್ಲಿ ಈಶ್ವರಪ್ಪ ಹಾಗೂ ಶಶಿಕಲಾ ಜೊಲ್ಲೆ ಮುಂದೆ ಪಿಕ್ಚರ್ ಅಭಿ ಬಾಕಿ ಹೈ ಎನ್ನುವ ಮೂಲಕ ಸಚಿವ ಎಂಬಿ ಪಾಟೀಲ್ ವಿರುದ್ಧ ಹರಿಹಾಯ್ದರು.
ಕನ್ಹೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಮುಕ್ತಾಯ – ಸಚಿವ ಎಂಬಿ ಪಾಟೀಲ್ ಕ್ಷೇತ್ರದಲ್ಲಿ ಕನ್ಹೇರಿ ಶ್ರೀ ಪರ ಸ್ವಾಮೀಜಿಗಳ ಶಕ್ತಿ ಪ್ರದರ್ಶನ


