ಉ.ಕ ಸುದ್ದಿಜಾಲ ಬೆಳಗಾವಿ :

ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನ ಗಾಂಜಾ ಗಮತ್ತು. ಚಿಕ್ಕ ಮಕ್ಕಳ ತಜ್ಞ ವೈದ್ಯನ ಮನೆಯಲ್ಲಿ ಗಾಂಜಾ ಪತ್ತೆ. ವೈದ್ಯ ಗಾಂಜಾ ಸೇವನೆ ಸಂಗತಿಯೂ ಪೊಲೀಸ್ ತನಿಖೆಯಲ್ಲಿ ದೃಢ. ಇಷ್ಟೆಲ್ಲ ಆದರೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಇಲ್ಲ ಮಾಹಿತಿ.

ಮಕ್ಕಳ ಆರೋಗ್ಯ ಕಾಪಾಡೋ ವೈದ್ಯನೇ ಮಾದಕ ವಸ್ತು ಸೇವನೆ. ಖಚಿತ ಮಾಹಿತಿ ಮೇರೆಗೆ ವೈದ್ಯನ ಮನೆ ಮೇಲೆ ಪೊಲೀಸ್ ದಾಳಿ. ದಾಳಿಯ ವೇಳೆಯಲ್ಲಿ ಮನೆಯಲ್ಲಿ 134 ಗ್ರಾಂ ಗಾಂಜಾ ಪತ್ತೆ. ವೈದ್ಯ ಡಾ. ರಾಹುಲ್ ಬಂತಿ ಮನೆಯಲ್ಲಿ ಪತ್ತೆಯಾಗಿರೋ ಮಾದಕ ವಸ್ತು. ಬೆಳಗಾವಿಯ ಶಿವಬಸವನ ನಗರದಲ್ಲಿ ಇರೋ ವೈದ್ಯನ ಮನೆ.

ವೈದ್ಯ ಬಂತಿ ಹಿರೇಬಾಗೇವಾಡಿ ಸಮುದಾಯ ಆರೋಗ್ಯಾಧಿಕಾರಿ. ಹಿರೇಬಾಗೇವಾಡಿಯಲ್ಲಿ ಚಿಕ್ಕ ಮಕ್ಕಳ ತಜ್ಱ ಆಗಿರೋ ವೈದ್ಯ. ವೈದ್ಯನ ವಿರುದ್ದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್. ಈಗಾಗಲೇ ವೈದ್ಯನಿಗೆ ನೋಟಿಸ್ ಜಾರಿ ಮಾಡಿರುವ ಮಾಳಮಾರುತಿ ಠಾಣೆ ಪೊಲೀಸರು. ವೈದ್ಯನ ವಿರುದ್ಧ ಕ್ರಮ ಯಾಕೆ ಇಲ್ಲ ಎನ್ನುವುದು ಪ್ರಶ್ನೆ!