ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಬೈಕ್ ಕಳ್ಳತನ ಪ್ರಕರಣ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಹಲವಾರು ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಮಲಿಕಜಾನ @ ಬಾಬ್ಯಾ ಫಾರುಕ ಬುಡಣ್ಣವರ (20) ಎಂಬಾತನನ್ನು ಪೀರನವಾಡಿ ನಾಕಾ ಹತ್ತಿರ ಹಿಡಿದು ವಿಚಾರಿಸದಾಗ ಹಲವಾರು ಬೈಕ್ ಗಳನ್ನಯ ಕಳ್ಳತನ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ಆರೋಪಿಯ ಬಳಿ ಅಂದಾಜು 4,90,000/-ರೂ. ಮೊತ್ತದ ಒಟ್ಟು 7 ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ನಗರದ ಟಿಳಕವಾಡಿ, ಎಪಿಎಂಸಿ ಮತ್ತು ಮಾರಿಹಾಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿಯ ತಲಾ ಒಂದೊಂದು ಬೈಕ್ ಒಳಗೊಂಡಿದೆ
ಒಂದು ಬೈಕ್ ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ ಸಿಕ್ತು ಏಳು ಬೈಕ್ : ಆರೋಪಿ ಅರೆಸ್ಟ್


