ಉ.ಕ ಸುದ್ದಿಜಾಲ ಬೆಳಗಾವಿ :
ಖರ್ತನಾಕ್ ಅಂತರರಾಜ್ಯ ಮನೆಗಳ್ಳನ ಅರೇಸ್ಟ್ : ಬೆಳಗಾವಿ ಪೊಲೀಸರ ನಿದ್ದೆಗೆಡಿಸಿದ ಖದೀಮ ಗೋವಾದಲ್ಲಿ ಕುಕ್ ಬೆಳಗಾವಿಯಲ್ಲಿ ಮನೆಗಳಿಗೆ ಕನ್ನಾ ಹಾಕ್ತಿದ್ದ ಆರೋಪಿ. ಬೆಳಗಾವಿ ಪೊಲೀಸರ ನಿದ್ದೆಗೆಡಿಸಿದ ಖದೀಮ. ಖರ್ತನಾಕ್ ಖದೀಮ ಸೆರೆ ಸಿಕ್ಕಿದ್ದೆ ರೋಚಕ.
ಕದ್ದ ಬೈಕ್ ನಲ್ಲಿ ಕುಂದಾನಗರಿಯಲ್ಲಿ ಜಾಲಿರೈಡ್ ಮಾಡಿದ್ದ ಆರೋಪಿ. ವಾರದಲ್ಲಿ ಎರಡು ದಿನ ಗೋವಾದಿಂದ ಬೆಳಗಾವಿಗೆ ಬರ್ತಿದ್ದ.ವಸಿಸಿಟಿವಿಯಲ್ಲಿ ಸೆರೆ ಸಿಕ್ಕ ಆರೋಪಿ ಜನ್ಮಜಾಲಾಡಿದ ಪೊಲೀಸರು. ಬೆಳಗಾವಿ ಟಿಳಕವಾಡಿ ಪೊಲೀಸರಿಂದ ಆರೋಪಿ ಅರೇಸ್ಟ್.
ಹೈದರಾಬಾದ್ ಮೂಲದ ಜಮಶೇದಖಾನ್ ಖಲೀಲ್ ಖಾನ್ (41) ಅರೇಸ್ಟ್. ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದ ತಂಡದಿಂದ ಅರೇಸ್ಟ್. ಆರೋಪಿಯಿಂದ 13 ಲಕ್ಷ 50 ಸಾವಿರ ಮೌಲ್ಯದ 115 ಗ್ರಾಂ ಕರಗಿಸಿಟ್ಟ ಬಂಗಾರ, ಬೈಕ್, ಮೊಬೈಲ್ ಜಪ್ತಿ.
ಬೆಳಗಾವಿಯ ಶಾಂತಿನಗರದಲ್ಲಿ 2 ಮನೆ, ಚಿದಂಬರ ನಗರದಲ್ಲಿ 1 ಮನೆಗೆ ಕನ್ನಾ ಹಾಕಿದ್ದನು. ಮೊಬೈಲ್ ಬಳಸಲ್ಲಾ, ಕನ್ನಾ ಹಾಕೋ ಮನೆಗಳ ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ. ಮನೆಯಿಂದ ಮನೆಗೆ ಕಂಪೌಡ್ ಹಾರಿ ಕಳ್ಳತನ ಮಾಡಿದ್ದ ಆಸಾಮಿ.
ಆರೋಪಿ ಮೇಲೆ ಹೈದರಾಬಾದ್ ನಲ್ಲಿ 17, ಬೆಳಗಾವಿಯಲ್ಲಿ 3 ಪ್ರಕರಣ ದಾಖಲು. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.
ಖರ್ತನಾಕ್ ಅಂತರರಾಜ್ಯ ಮನೆಗಳ್ಳನ ಅರೇಸ್ಟ್ : ಬೆಳಗಾವಿ ಪೊಲೀಸರ ನಿದ್ದೆಗೆಡಿಸಿದ ಖದೀಮ


