ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿಯಲ್ಲಿ ಬಿಜೆಪಿ ಬಹಿರಂಗ ಸಮಾವೇಶ. ಸಮಾವೇಶದಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಭಾಷಣ. ನಾನು, ಬಸಗೌಡರಂತಹ ನಾಯಕರು ರಾಜಕಾರಣಕ್ಕೆ ಬಂದದ್ದು, ಹಿಂದುತ್ವಕ್ಕಾಗಿ. ಸಮಾರಂಭದಲ್ಲಿ ಶಾಸಕ ಲಕ್ಷ್ಮಣ ಸವದಿಯನ್ನು ಕಿಚಾಯಿಸಿದ ಸಿ.ಟಿ.ರವಿ.

ಲಕ್ಷ್ಮಣ ಸವದಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ಭಾರತ್ ಮಾತಾ ಕೀ ಜೈ ಅನ್ನೋದಕ್ಕೂ ಎಐಸಿಸಿ ಅಧ್ಯಕ್ಷರ ಪರ್ಮಿಶನ್ ತಗೊಳ್ಳಿ ಪರಿಸ್ಥಿತಿ ಸವದಿಗೆ ಬಂದಿದೆ. ಜಾತಿ ರಾಜಕಾಣದಿಂದ ದೇಶ ಗೆಲ್ಲುವುದಿಲ್ಲ, ನೀತಿ ರಾಜಕಾರಣದಿಂದ ದೇಶ ಗೆಲ್ಲುತ್ತದೆ.
ಕಾಂಗ್ರೆಸ್ ನೀತಿಗೆಟ್ಟ ರಾಜಕಾರಣ ಮಾಡುತ್ತಿದೆ.

ಬಾಂಬ್ ಇಡುವವರನ್ನು ಕಾಂಗ್ರೆಸ್ ‘ದೇ ಆರ್ ಮೈ ಬ್ರದರ್ಸ್’ ಅಂತ ಹೇಳುತ್ತೆ. ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಜನತೆಯ ಪರವಾಗಿ ನಿಂತಿತ್ತು. ಪ್ರಧಾನಿ ಮೋದಿಯವರು ದೇಶದ ಜನತೆಗೆ ಬಹಳ ಯೋಜನೆ ನೀಡಿದ್ರು.

ಇಲ್ಲಿ ಮುಸ್ಲಿಂ, ಕ್ರೈಸ್ತರೆಂದು ಡಿವೈಡ್ ಮಾಡಿ ಯೋಜನೆ ರೂಪಿಸಲಿಲ್ಲ. ಆಸ್ಟ್ರೇಲಿಯಾದ ಅಧ್ಯಕ್ಷರು ಮೋದಿ ಈಸ್ ದ್ ಬಾಸ್ ಅಂತ ಹೇಳಿದ್ರು. ಮೋದಿ ಅಮೇರಿಕಕ್ಕೆ ಹೋದರೆ ರೆಡ್ ಕಾರ್ಪೇಟ್ ಹಾಕಿ ಸ್ವಾಗತ ಮಾಡುತ್ತದೆ. ಮೋದ ಹವಾ ದೇಶದಲ್ಲಿ ಅಷ್ಟೇ ಅಲ್ಲ, ಇಡೀ ಪ್ರಪಂಚಾದ್ಯಂತ ಹವಾ ಇದೆ.

ಚಿಕ್ಕೋಡಿಯಲ್ಲಿ ಸಿಟಿ ರವಿ ಭಾಷಣ

ಅಂತಹ ಮೋದಿ ನಮ್ಮ ನಾಯಕ ಎನ್ನುವುದೇ ನಮಗೆ ಹೆಮ್ಮ. ಕಾಶ್ಮೀರಕ್ಕೆ ಆರ್ಟಿಕಲ್ 370 ತಂದು ಭಯೋತ್ಪಾದಕರು ಉತ್ಪಾದನೆ ಆಗುವಂತೆ ಮಾಡಿದ್ರು. ತುರ್ತು ಪರಿಸ್ಥಿತಿ ಹೇರಿ ಜನರಿಗೆ ಸಂಕಷ್ಟ ನೀಡಿದ್ದು ಕಾಂಗ್ರೆಸ್.

ಎಸ್‌ಎಸ್ಟಿ ಸಮುದಾಯದ ಮೀಸಲಾತಿ ಏರಿಕೆ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ದೇಶವನ್ನು ತುಂಡುತುಂಡಾಗಿ ಕತ್ತರಿಸುವ ತುಕಡೇ ಗ್ಯಾಂಗ್ ಜತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕೊಡ್ತಿರೋದು ನಮ್ಮನ್ನು ಹರಕೆಯ ಕುರಿ ಮಾಡಲು. ಸಿದ್ದರಾಮಯ್ಯರ ಗ್ಯಾರಂಟಿ ಅಂದ್ರೆ ಗಂಡನ ಹತ್ರ ಕಿತ್ಕೊಟ್ಟು ಹೆಂಡತಿಗೆ ಕೊಟ್ಟಂತಾಗಿದೆ.

ರಾಜ್ಯದಲ್ಲಿ ಕರೆಂಟ್ರ ಪ್ರೀ ಅಂತ ಹೇಳಿದ್ರು. ಸದ್ಯ ರಾಜ್ಯದಲ್ಲಿ ಕರೆಂಟೇ ಇಲ್ಲ. ರಸ್ತೆ ಮೇಲ ಬಸ್ಸೇ ಇಲ್ಲ, ಅದು ಪ್ರೀ. ಶಾಲೆಗೆ ಹೋಗೋ ಮಕ್ಕಳಿಗೆ ಬಸ್ ಇಲ್ಲ. ಕಾಂಗ್ರೆಸ್ ಸರ್ಕಾರ ನಿಮ್ಮನ್ನು ನೀರಿಲ್ಲದೇ ಬೊಳಿಸಿದ್ದಾರೆ.

ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕರ್ನಾಟಕಕ್ಕೆ 1ಲಕ್ಷದ 42 ಸಾವಿರ ಕೋಟಿ ಅನುದಾನ ಕೊಟ್ಟಿದ್ರು. ಪ್ರಧಾನಿ ಮೋದಿ 5 ಲಕ್ಷದ 28 ಸಾವಿರ ಕೋಟಿ ರೂ ಅನುದಾನ ನೀಡಿದ್ದಾನೆ. ಆದ್ರೆ ಕರ್ನಾಟಕದ ಕಾಂಗ್ರೆಸ್ ನಾಯಕರು ಅನುದಾನದಲ್ಲಿ ಕೊರತೆ ಆಗಿದೆ ಎಂದು ಬೊಬ್ಬೆ ಹೊಡಿತಾರೆ.