ಉ.ಕ ಸುದ್ದಿಜಾಲ ಬೆಳಗಾವಿ :

ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಅಸ್ತು ಅಂದ್ರು ಕುಡಿದು ಬಂದು ನಿತ್ಯ ಗಲಾಟೆ, ಹಸೆಮಣೆ ಏರಬೇಕಿದ್ದ ಕಿರಿಯ ಮಗನಿಗೆ ಹಿರಿಯ ಮಗನೊಂದಿಗೆ ಚಟ್ಟ ಕಟ್ಟಿದ ತಂದೆ. ಮದುವೆ ಮಾಡಿಸಿಲ್ಲ ಎಂದು ಕುಡಿದು ಬಂದು ನಿತ್ಯ ಕಿರಿಕಿರಿ ಮಾಡ್ತಿದ್ದ ಮಗ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ಘೋರ ಘಟನೆ. ತಂದೆ ಮತ್ತು ಮೊದಲನೇ ಮಗನಿಂದ ಕಲ್ಲು, ಇಟ್ಟಿಗಳಿಂದ ತಲೆ ಜಜ್ಜಿ ಬರ್ಬರ ಹತ್ಯೆ. ಚಿಕ್ಕನಂದಿಹಳ್ಳಿ ಗ್ರಾಮದ ಮಂಜುನಾಥ ಉಳ್ಳಾಗಡ್ಡಿ (25) ಹತ್ಯೆಯಾದವ.

ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ(28), ತಂದೆ ನಾಗಪ್ಪ ಉಳ್ಳೆಗಡ್ಡಿ(63) ಕೃತ್ಯ. ಪ್ರೀತಿಸಿದ ಯುವತಿ ಜೊತೆಗೆ ಮಂಜುನಾಥ ಮದುವೆಗೆ ಆರಂಭದಲ್ಲಿ ಪೋಷಕರ ವಿರೋಧ. ಪ್ರೀತಿಸಿದ ಯುವತಿಯನ್ನೇ ಮದುವೆ ಆಗಲು ಹಠ ಹಿಡಿದಿದ್ದ ಮಂಜುನಾಥ.

ಪ್ರೀತಿಸಿದ ‌ಯುವತಿ ಜೊತೆಗೆ ಮದುವೆಗೆ ಅಸ್ತು ಎಂದು ನಿಶ್ಚಿತಾರ್ಥ ಕಾರ್ಯ ಮಾಡಿದ್ದ ಪೋಷಕರು. ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ತಿದ್ದರೂ ಕುಡಿದು ಬಂದು ಮಂಜುನಾಥ ‌ಗಲಾಟೆ. ಮದುವೆಗೆ ಒಪ್ಪಿಕೊಳ್ಳಲು ತಡ ಮಾಡಿದಕ್ಕೆ ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ.

ನಿನ್ನೆ ಕೂಡ ಕುಡಿದು ಬಂದು ತಾಯಿ ಜೊತೆಗೆ ಗಲಾಟೆಗೆ ಮಾಡ್ತಿದ್ದ ಮಂಜುನಾಥ. ಇದರಿಂದ ಸಿಟ್ಟಿಗೆದ್ದು ಹಿರಿಯ ಮಗ ಗುರುಬಸಪ್ಪ ಮತ್ತು ತಂದೆ ನಾಗಪ್ಪ ಸೇರಿ ಮಂಜುನಾಥ ಕೊಲೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಈಗಾಗಲೇ ಇಬ್ಬರು ಆರೋಪಿಗಳು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿಕೆ ನೀಡಿದ್ದಾರೆ.