ಉ.ಕ ಸುದ್ದಿಜಾಲ ರಾಯಬಾಗ :
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಚಿಕ್ಕೋಡಿ ಉಪವಿಭಾಗದ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಗೆ ಪ್ರಥಮ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಲಕ್ಷ್ಮೀ ಸಂತೋಷ ಕೌಲಗಿ.
ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿ ಇಂದು ರಾಜ್ಯಕ್ಕೆ ನಾಲಕ್ನೇ ಸ್ಥಾನ ಪಡೆದಿದ್ದು ನನಗೆ ಹೆಮ್ಮೆ ಆಗಿದೆ ಇದೆಲ್ಲ ಸಾಧನೆಯನ್ನ ನನ್ನ ತಂದೆ, ತಾಯಿ ಹಾಗೂ ನನ್ನ ಅಜ್ಜ, ಅಜ್ಜಿಗೆ ಸಲ್ಲುತ್ತದೆ ಎನ್ನುತ್ತಾಳೆ ಲಕ್ಷ್ಮೀ ಕೌಲಗಿ.
625ರ ಪೈಕಿ 622 ಅಂಕ ಪಡೆದಿರುವ ಲಕ್ಷ್ಮೀ ಕನ್ನಡಕ್ಕೆ – 125, ಇಂಗ್ಲೀಷ – 99, ಹಿಂದಿ – 100, ಗಣಿತ – 98, ವಿಜ್ಞಾನ – 100, ಸಮಾಜ ವಿಜ್ಞಾನ – 100 ಅಂಕ ಪಡೆದಿದ್ದಾಳೆ ಒಟ್ಟು 99.52% ಮಾಡುವುದರ ಮೂಳ ಹಾರೂಗೇರಿ ಪಟ್ಟಣದ ಕೀರ್ತಿ ಮತಷ್ಟು ಹೆಚ್ಚಿಸಿದ್ದಾಳೆ.

