ಉ.ಕ ಸುದ್ದಿಜಾಲ ಬೈಲಹೊಂಗಲ :
ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೊಡಲಿಲ್ಲ ಅನ್ನೋ ಕಾರಣಕ್ಕೆ ಹರಿಯಿತು ನೆತ್ತರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಘೋರ ಘಟನೆ. ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಹರಿಯಿತು ನೆತ್ತರು.
ಪಾರ್ಟಿ ಕೊಡಿಸುವ ವಿಚಾರಕ್ಕೆ ಶುರುವಾದ ಮಾತುಕತೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ. ವಣ್ಣೂರ ಗ್ರಾಮದ ಹಣಮಂತ ಯಮನಪ್ಪ ಇಟಗಿ ಕೊಲೆಯಾದ ದುರ್ದೈವಿ. ಗೆಳೆಯ ವಿಶ್ವನಾಥ ಪೂಜೇರಿಯೇ ಹಣಮಂತನನ್ನು ಕೊಲೆಗೈದ ಪಾಪಿ. ಆತ್ಮೀಯತೆ ಕಾರಣಕ್ಕೆ ಗಂಡು ಮಗು ಹುಟ್ಟಿದಕ್ಕೆ ವಿಶ್ವನಾಥನ ಬಳಿ ಪಾರ್ಟಿ ಕೇಳಿದ್ದ ಹನುಮಂತಪ್ಪ.
ಮದ್ಯದ ಅಮಲಿನಲ್ಲಿದ್ದು ಗ್ರಾಮದ ಕಟ್ಟೆ ಕುಳಿತು ಹರಟೆಯಲ್ಲಿ ತೊಡಗಿದ್ದ ಇಬ್ಬರು.ಪಾರ್ಟಿ ವಿಚಾರವಾಗಿ ಇಬ್ಬರ ಮಧ್ಯೆ ಕಿರಿಕ್ ಉಂಟಾಗಿ ಕೆಲಹೊತ್ತು ಗಲಾಟೆ.ಈ ವೇಳೆ ವಿಶ್ವನಾಥ ಕಣ್ಣಿಗೆ ರಭಸವಾಗಿ ತಾಗಿದ ಹಣಮಂತಪ್ಪ ಬೆರಳು.
ಇದೇ ಸಿಟ್ಟು ಇಟ್ಟುಕೊಂಡು ಕಲ್ಲಿನಿಂದ ಹಣಮಂತ ತಲೆಗೆ ಹೊಡೆದ ವಿಶ್ವನಾಥ. ತೀವ್ರ ರಕ್ತಸ್ರಾವ ಕಾರಣಕ್ಕೆ ಸ್ಥಳದಲ್ಲೇ ಕುಸಿದು ಮೃತಪಟ್ಟ ಹಣಮಂತಪ್ಪ. ಹಣಮಂತ ಕುಸಿದು ಬೀಳ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತು ವಿಶ್ವನಾಥ ಪರಾರಿ.
ಕೆಲವೇ ಗಂಟೆಗಳಲ್ಲಿ ಆರೋಪಿ ವಿಶ್ವನಾಥ ಬಂಧಿಸಿ ಜೈಲಿಗಟ್ಟಿದ ನೇಸರಗಿ ಠಾಣೆ ಪೊಲೀಸರು.
ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕೊಲೆ
