ಉ.ಕ ಸುದ್ದಿಜಾಲ ಬೆಳಗಾವಿ :

ಶನಿ ರಾಶಿ ಕಾಟದಿಂದ ಇಂದು‌ ನಾನು ಮುಕ್ತಿ ‌ಹೊಂದಿದ್ದೇನೆ, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ ಅಚ್ಛರಿಯ ಹೇಳಿಕೆ. ಬೆಳಗಾವಿ ಬಾರ್ ಕೌನ್ಸಿಲ್ ಆಯೋಜಿಸಿದ್ದ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ‌ಭಾಷಣ.

ಇವತ್ತು ಕುಂಭ ರಾಶಿ, ಮಕರ ರಾಶಿಯಿಂದ ಶನಿ ಬೇರೆ ಕಡೆ ಹೋಗ್ತಿದ್ದಾನೆ. ನನ್ನಿಂದ ಈಗ ಶನಿ ರಾಶಿ ಬೇರೆ ರಾಶಿ ಕಡೆ ಹೋಗ್ತಿದ್ದಾನೆ. ಇವತ್ತು ಬೆಳಗ್ಗೆ‌ ನನ್ನ ತಾಯಿ ಶನಿ ಮಂದಿರಕ್ಕೆ ‌ಹೋಗಲೇಬೇಕು ಎಂದರು. ನಮ್ಮ‌ ಮನೆಯಲ್ಲಿ ಬಹಳಷ್ಟು ಯಜ್ಞ ಯಾಗಗಳನ್ನು ಮಾಡುತ್ತೇವೆ.

ನಮಗೆ ಮೊದಲಿನಿಂದಲೂ ದೇವರ ಮೇಲೆ‌ ಬಹಳ‌ ನಂಬಿಕೆ. ಇವತ್ತು ‌ಊಟ ಮಾಡವಾಗ ತಾಯಿ ಒಂದು ಮಾತು ಹೇಳಿದ್ರು ಅಮವಾಸ್ಯೆ ಇದೆ ಎಲ್ಲೂ ಹೋಗಬೇಡ, ಮನೆಯಲ್ಲಿ ಮಲಗು ಎಂದಿದ್ರು ಹಾಗಾಗಲ್ಲ, ನಾನು ಜೀವನದಲ್ಲಿ ಯಾರಿಗೂ ಹೆದರಲ್ಲ, ಆದರೆ ವಕೀಲರು- ಜಡ್ಜ್‌ಗಳಿಗೆ ಹೆದರುತ್ತೇನೆ.

ಕಾನೂನಿಗೆ ಗೌರವ ಕೊಡುವುದು ಎಲ್ಲರ ಕರ್ತವ್ಯ, ನಾನು ಕೂಡ ಕಾನೂನಿಗೆ ಗೌರವ ಕೊಡ್ತಿನಿ. ಈಗಷ್ಟೇ ಸಾಡೆಸಾತಿ ಶನಿ ಮುಗಿದಿದೆ ಎಚ್ಚರಿಕೆಯಿಂದ ಭಾಷಣ ಮಾಡುವಂತೆಯೂ ನನ್ನ ತಾಯಿ ಹೇಳಿದ್ರು. ಅದಕ್ಕೆ ನಾನು ಕೊನೆಯದಾಗಿ ಮಾತನಾಡುತ್ತೇನೆ ಎಂದು ಆಯೋಜಕರಿಗೆ ಹೇಳಿದ್ದೆ ಎಂದ ಹೆಬ್ಬಾಳ್ಕರ್.