ಉ.ಕ ಸುದ್ದಿಜಾಲ ಮೋಳೆ :

ಬೆಳಗಾವಿ ಜಿಲ್ಲೆಯ ಮೋಳೆ ಗ್ರಾಮದ ಒಂದು ಕುಟುಂಬ ಅಪರೂಪದ ಸಂಪ್ರದಾಯ ಆಚರಣೆ ಮಾಡಿ ಸುದ್ದಿ ಆಗಿದೆ ಮೋಳೆ ಗ್ರಾಮ ಸಂಭೋಜಿ ಕುಟುಂಬ ಆಕಳಿಗೆ ಶಾಸ್ರೋಕ್ತವಾಗಿ ಸೀಮಂತ ಕಾರ್ಯ ಮಾಡಿ ಊರಿಗೆ ಊಟ ಹಾಕಿರುವ ಅಪರೂಪಕ್ಕೆ ಸಾಕ್ಷಿಯಾಗಿದೆ.

ರೈತ ಕುಟುಂಬದ ಗೋವಿಂದ ಸಿದರಾಯ ಸಂಭೋಜಿ ಅವರ ಆಕಳು ಮೊದಲ ಬಾರಿಗೆ ಏಳು ತಿಂಗಳ ಗರ್ಭಿಣಿಯಾದ ಹಿನ್ನೆಲೆ ಸೀಮಂತ ಕಾರ್ಯಕ್ರಮ ಮನೆಯ ಮುಂದೆ ಶಾಮಿಯಾನ ಸಕಲ ವಾದ್ಯ ಮೇಳಗಳೊಂದಿಗೆ ಆಕಳಿಗೆ ಸೀರೆ ಉಡಿಸಿ, ಉಡಿ ತುಂಬಿ, ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ, ಹೂವಿನ ಮಾಲೆ ಹಾಕಿ ಸಿಂಗರಿಸಲಾಯಿತು, ಆರತಿ ಬೆಳಗಿ, ದೃಷ್ಟಿ ತೆಗದು ಸಿಹಿ ತಿನ್ನಿಸಿ ಗ್ರಾಮದ ಜನರನ್ನು ಕೆರದು ಸಿಹಿ ಭೋಜನ ಏರ್ಪಡಿಸಿ ಮನೆ ಮಗಳಿಗೆ ಸೀಮಂತ ಮಾಡಿದಂತೆ ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ರೈತ ಗೋವಿಂದ ಸಂಬೋಜಿ ಆಧುನಿಕ ಯುಗದಲ್ಲಿ ನಶಿಸಿ ಹೋಗುತ್ತಿರುವ ದೇಶಿ ತಳಿಯ ಜಾನುವಾರುಗಳನ್ನು ಉಳಿಸಿ ಅವುಗಳ ಸಂತತಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಾಗಿದೆ ಇಂದು ಅಲ್ಲೊಂದು ಇಲ್ಲೊಂದು ಉಳಿದಿರುವ ದೇಶಿ ಆಕಳುಗಳನ್ನು ತಿಳುವಳಿಕೆಯುಳ್ಳ ರೈತ ಸಾಕಿ ಪೂಜಿಸಿ ಅದನ್ನು ಸಲಹುವ ಕೆಲಸ ಮಾಡುತ್ತಾನೆ ಎಲ್ಲ ರೈತರು ಸದ್ಯದ ಲಾಭಕ್ಕಾಗಿ ಅವುಗಳ ಕಡೆಗಣಿಸಬಾರದು ಪ್ರತಿ ರೈತನು ಒಂದು ದೇಶಿ ತಳಿಯ ಆಕಳನ್ನು ಸಲಹುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ವೇಳೆ ಮುಖಂಡರಾದ ಸಿದ್ದಪ್ಪ ಕನಾಳೆ, ಶಿವಾನಂದ ಹೊಸಮನಿ, ಭರಮಗೌಡ ಹುದ್ದಾರ, ಅರುಣ ಭಡಕೆ, ಬಾಹುಬಲಿ‌ ಟೋಪಗಿ, ಗಜಾನನ ಯರಂಡೋಲಿ, ಗಣಪತಿ ಸಂಭೋಜಿ, ರಾಮು ಸಂಬೋಜಿ, ರಾಜು ಸಂಭೋಜಿ, ಹಣಮಂತ ಸಂಭೋಜಿ ವೈದ್ಯರಾದ ಹಾದಿಮನಿ ಹಾಗೂ ಯೋಗೇಶ ರತ್ನಪಗೋಳ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದರು.