ಉ.ಕ ಸುದ್ದಿಜಾಲ ಬೆಳಗಾವಿ :
ಸಾವಿರಾರು ಸಂಖ್ಯೆಯಲ್ಲಿ ಜೈಲ ಭರೋ ರೈತರ ಪಾದಯಾತ್ರೆ ನಡೆಯುತ್ತಿದ್ದು ಪ್ರತಿ ಹಳ್ಳಿಯಲ್ಲೂ ರೈತರಿಗೆ ಪೂಜೆ ಮಾಡುವುದರ ಮೂಲಕ ಗೆದ್ದು ಬನ್ನಿ ಎಂದು ಹಿರಿಯರು ಆಶೀರ್ವಾದ ಮಾಡಿ ಕಳಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಸದ್ಯ ಕಬ್ಬೂರು ತಲುಪಿದ ಕಬ್ಬು ಬೆಳೆಗಾರರ ಪಾದಯಾತ್ರೆ.
ಇವತ್ತು ಕಬ್ಬೂರು ಗ್ರಾಮದಲ್ಲಿ ವಸತಿ, ಮತ್ತೆ ನಾಳೆ ಮುಂದುವರೆಯುವ ಪಾದಯಾತ್ರೆ. ಪಾದಯಾತ್ರೆ ವೇಳೆ ರೈತ ಮುಖಂಡ ಚೂನಪ್ಪಾ ಪೂಜಾರಿ ಹೇಳಿಕೆ. ಇವತ್ತು ಅದ್ಭುತ ಪಾದಯಾತ್ರೆ ನಡೆದಿದೆ. ಸಿಎಂ ನಮಗೆ ಅಪಮಾನ ಮಾಡಿದ್ದಾರೆ. ನಮ್ಮ ರೈತರ ಮೇಲೆ ನಮಗೆ ನಂಬಿಕೆ ಇದೆ, ನಮ್ಮನ್ನು ಕೈ ಬಿಡೋದಿಲ್ಲ.
ನಾಲ್ಕೈದು ಲಕ್ಷ ಜನ ಇವತ್ತು ಪಾದಯಾತ್ರೆಯಲ್ಲಿ ಭಾಗಿಯಾದ್ದಾರೆ. ನಾಳೆ ಜಿಲ್ಲಾ ಉಸ್ತುವಾರಿ ನಮ್ಮನ್ನು ಮೀಟಿಂಗ್ ಕರೆದಿದ್ದಾರೆ. ನಾಳೆ ಮೀಟಿಂಗ್ ಗೆ ಹೋಗ್ತವೆ ಚರ್ಚೆ ಮಾಡ್ತೀವಿ. ಸಕ್ಕರೆ ದರ 50 ರುಪಾಯಿ ಆದ್ರೆ ಕಬ್ಬಿನ ದರ 4000 ಕೊಡ್ತೀವಿ ಅಂತಾ ಹೇಳಿದ್ದಾರೆ.
ನೂರಕ್ಕೆ ನೂರರಷ್ಟು ಕಾರ್ಖಾನೆ ಮಾಲೀಕರು ಕೊಡ್ತಾರೆ. ಆದ್ರೆ ಸರ್ಕಾರ 1 ಸಾವಿರ ರೂಪಾಯಿ ಕೊಡಲೇಬೇಕು. ಅಲ್ಲಿವರೆಗೆ ನಾವು ಸಿಎಂ ಅವರನ್ನು ಬಿಡಲ್ಲ. ನಾಳೆ ಬೆಳಗಾವಿಗೆ ಲಕ್ಷಾಂತರ ಜನ ಬರುತ್ತಾರೆ. ಮೀಟಿಂಗ್ ಮುಗಿಯುವವರೆಗೆ ಇಲ್ಲೇ ಇರ್ತೇವೆ.
ಬಳಿಕ ಮತ್ತೆ ಪಾದಯಾತ್ರೆ ಶುರು ಮಾಡ್ತವೆ.
ರಾಜ್ಯದ ಮುಖ್ಯಮಂತ್ರಿಗೆ ತಾಕತ್ತು ಇದ್ರೆ. ಕೇಂದ್ರದ ಮೇಲೆ ಬೊಟ್ಟು ಮಾಡ್ದೆ ಒಂದು ಸಾವಿರ ಘೋಷಣೆ ಮಾಡಲಿ. 26 ರವರೆಗೆ ಕೇಂದ್ರ ಸರ್ಕಾರಕ್ಕೆ ಗಡವು ಇದೆ. ಅವರು ಮಾಡಲಿಲ್ಲ ಅಂದ್ರೆ ನಮ್ಮ ಬೊಟ್ಟು ಜೋಶಿ ಕಣ್ಣಲ್ಲಿ ಇರ್ತದೆ.
ಬೋಗಸ್ ಸಿಎಂ ಡಿಕೆ ಶಿವಕುಮಾರ್. ವಿಶ್ವಾಸ ಕಳೆದುಕೊಂಡಿದ್ದಾರೆ ಅನುಭವಿಸಲೇ ಬೇಕು. ಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರೈತ ಮುಖಂಡ ಚುನಪ್ಪ
