ಉ.ಕ‌ ಸುದ್ದಿಜಾಲ ಕಾಗವಾಡ :

ಸಿಎಂ ಸಿದ್ದರಾಮಯ್ಯ ಎಂದೆಂದಿಗೂ ನಮ್ಮಗೆ ಗುರು, ಸಿದ್ದರಾಮಯ್ಯ ಮೊದಲ ಹೇಗಿದ್ದರೊ ಈಗ ಇಲ್ಲ. ಆದರೆ ಕೊತವಾಲನ ಶಿಷ್ಯ ಡಿಸಿಎಂ ಡಿ‌ ಕೆ‌ ಶಿವಕುಮಾರ ಇವರಿಂದ ಆಡಳಿತ ವ್ಯವಸ್ಥೆ ಬದಲಾವಣೆ ಆಗಿದೆ. ನಮ್ಮ ಸುದೈವ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಡಿಕೆಸಿ ವಿರುದ್ದ ಹರಿಹಾಯ್ದ ಗೋಕಾಕ ಸಾಹುಕಾರ ರಮೇಶ ಜಾರಕಿಹೋಳಿ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲರ ನೇತೃತ್ವದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ಹಾಲಿ ಶಾಸಕ ರಾಜು‌ ಕಾಗೆ ದುರಾಡಳಿತ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು,  ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗದೇ ಕೊತವಾಲನ ಶಿಷ್ಯ ಡಿ ಕೆ ಶಿವಕುಮಾರ ಆಗಿದ್ದರೆ ವಿಷಕನ್ಯೆ ಮತ್ತು ಡಿಕೆಸಿ‌ಕೂಡಿ ಬೆಳಗಾವಿ ಜಿಲ್ಲೆ ಮಾರಾಟ ಮಾಡುತ್ತಿದ್ದರು.

ಅಯೋಧ್ಯೆ ರಾಮ ಮಂದಿರ ಕೇಂದ್ರ ಸರ್ಕಾರ ರಜೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಇವತ್ತು ಸಂಜೆ ವರಿಗೆ ರಾಜ್ಯ ಸರ್ಕಾರ ರಜೆ ನೀಡಬಹುದು ಕಾದು ನೋಡೋಣ. ಕಾಂಗ್ರೆಸ್ ಸರ್ಕಾರ ರಜೆ ಕೊಡಬಹುದು ಎಂದರು.

ಕಾಂಗ್ರೆಸ್ ದ್ವೇಷದ ರಾಜಕಾರಣ ವಿಚಾರವಾಗಿ‌ ಪ್ರತಿಕ್ರಿಯಿಸೊದ ಅವರು ಈ ಸರ್ಕಾರದಲ್ಲಿ ನಡೆಯುತ್ತಿದೆ, ನಾನು ಕಾದು ನೋಡುತ್ತೇನೆ. ಇದು ತುಂಬಾ ದಿನದವರಿಗೆ ನಡೆಯುವುದಿಲ್ಲ. ಆದಷ್ಟು ಬೇಗನೆ ಅಂತ್ಯ ಆಗುತ್ತದೆ ಎಂದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ನೇಮಕಾತಿ ವಿಚಾರ. ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಯಾವುದೇ ಬದಲಾವಣೆ ಆಗುವುದಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬೇರೆಯವರು ಯಾರು ಆಗುವುದಿಲ್ಲ, ರಮೇಶ ಕತ್ತಿ ಮುಂದುವರೆಯುತ್ತಾರೆ. ಯಾವುದೇ ಬದಲಾವಣೆ ಇಲ್ಲ ಎಲ್ಲವೂ ಸುಳ್ಳು ಎಂದರು.

ರಮೇಶ್ ಜಾರಕಿಹೊಳಿ ಮೇಲೆ ಅಪೆಕ್ಸ್ ಬ್ಯಾಂಕ್ ನಿಂದ ವಂಚನೆ ಪ್ರಕರಣ ದಾಖಲು ವಿಚಾರ, ಡಿಕೆ ಶಿವಕುಮಾರ್ ಪ್ರಕರಣ ದಾಖಲು ಮಾಡಿ ಸಮಾಧಾನ ಮಾಡುತ್ತಾನೆ. ನನಗೆ ಸಿಡಿ ಪ್ರಕರಣದಲ್ಲಿ ಶಿಕ್ಷೆ ಮಾಡಬೇಕು ಎಂದು ಮಾಡಿದ್ದ ಆದರೆ ಆಗ್ಲಿಲ್ಲ. ಅದರಲ್ಲಿ ಅವನು ವಿಫಲನಾಗಿದ್ದಾನೆ.

ಇವತ್ತು 420 ಕೇಸ್ ದಾಖಲು ಮಾಡಿದ್ದಾನೆ. ಟಿವಿಯಲ್ಲಿ ನನ್ನ ಹೆಸರು ನೊಡಿ ಸಮಾಧಾನ ಮಾಡಿಕೊಳ್ಳುತ್ತಾನೆ. ನಾನು ಗಟ್ಟಿ ಇದಿನಿ ನನ್ನ ಮೇಲೆ ಪ್ರಕರಣ ದಾಖಲು ಮಾಡುತ್ತಾನೆ. ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ. ಮಾತನಾಡಬೇಡಿ ಎಂದು ವಕೀಲರು ಸಲಹೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ನಿಮ್ಮ ಶಕ್ತಿ ಕುಂದಿಸುವ ಈ ಪ್ರಕರಣ ದಾಖಲು ವಿಚಾರ. ಡಿಕೆ ಶಿವಕುಮಾರ್ ಅಪ್ಪ ಬಂದರು ನಾನು ಹಿಂದೆ ಸರಿಯುವುದಿಲ್ಲ. ಲೋಕಸಭಾ ಚುನಾವಣೆ ಏನಾದರೂ ಬದಲಾವಣೆ ವಿಚಾರ. ಏನು ಆಗುತ್ತದೆ ಎಂಬುದು ಕಾದು ನೋಡಬೇಕು.

ರಾಮ ಮಂದಿರ ಉದ್ಘಾಟನೆ ವಿಚಾರ. ರಾಮ ಎಲ್ಲರಿಗೂ ದೇವರಿಗೆ. ಆದರೆ ಕಾಂಗ್ರೆಸ್ ನವರು ಈ ರೀತಿ ಮಾಡುತ್ತಿರುವುದು ತಿಳಿಯುತ್ತಿಲ್ಲ. ಮುಸ್ಲಿಂ ಸಮುದಾಯ ಮತ ಓಲೈಕೆ ಕುರಿತು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಅದಕ್ಕೆ ರಾಮ ಮಂದಿರ ಉದ್ಘಾಟನೆ ಹೋಗುತ್ತಿಲ್ಲ.

ಸಿಎಂ ಸಿದ್ದರಾಮಯ್ಯ ಅವರಿಗೆ ಯಾರೂ ಸಲಹೆ ನೀಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಮ ಮಂದಿರ ಉದ್ಘಾಟನೆ ದೇಶವೇ ಕಾತುರದಿಂದ ಕಾದಿದೆ.

ಲಕ್ಷ್ಮಣ್ ಸವದಿ ಹತ್ತು ಲಕ್ಷ ರೂಪಾಯಿ ಹೇಳಿಕೆ ವಿಚಾರ. ನಾನು ಒಂದು ಕೋಟಿ ರೂಪಾಯಿ ನೀಡಿದ್ದೇನೆ. ಲಕ್ಷ್ಮಣ್ ಸವದಿ ಮಾತಿಗೆ ತಿರುಗೇಟು ನೀಡಿದ ರಮೇಶ್ ಜಾರಕಿಹೊಳಿ.

ಸಿದ್ದರಾಮಯ್ಯ ಆಡಳಿತದಲ್ಲಿ ಬದಲಾವಣೆ ವಿಚಾರ. ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಿ ಹ್ಯಾಂಡ್ ಕೆಲಸ ಮಾಡಲು ಅಲ್ಲಿಯವರು ಬಿಡುತ್ತಿಲ್ಲ. ಅವರ ಮೇಲೆ ಒತ್ತಡ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ತಂದು ಸಿಎಂ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದ್ದಾನೆ.