ಉ.ಕ ಸುದ್ದಿಜಾಲ ಚಿಕ್ಕೋಡಿ :
ಮದುವೆ ಮಹೂರ್ತ ಇಡುತ್ತಿದ್ದವನಿಗೆ ಮಹೂರ್ತ ಇಟ್ಟ ಪಾಪಿ,ಅನ್ಯ ಜಾತಿಯ ಯುವಕನೊಂದಿಗೆ ಮಗಳ ಮದುವೆ ಮಾಡಿಸಿದ್ದಕ್ಕೆ ಜ್ಯೋತಿಷಿಯ ಭೀಕರ ಹತ್ಯೆ. ಮಹಾರಾಷ್ಟ್ರ ಮೂಲದ ಜ್ಯೊತೀಷಿ ಮಂದಾರ್ ಅಜಿತ್ ರಾಂಡೆ (35) ಮೃತ ವ್ಯಕ್ತಿ
ಮಹಾರಾಷ್ಟ್ರದ ಇಚಲಕರಂಜಿ ಮೂಲದ ಜ್ಯೊತೀಷಿ ಮಂದಾರ್ ರಾಂಡೆ ಬಾಬಾಸೋ ದೀಪಕ್ ಮಕ್ದುಮ್ ಕೊಲೆ ಮಾಡಿದ ಆರೋಪಿ ಅಕ್ಟೋಬರ್ 30 ರಂದು ಮದುವೆ ಮಾಡುವುದಿದೆ ಎಂದು ಕರೆದು ಕೊಲೆ. ಬೆಳಗಾವಿಯ ನಿಪ್ಪಾಣಿ ತಾಲುಕಿನ ಮಾನಕಾಪುರ ಗ್ರಾಮಕ್ಕೆ ಕರೆದು ಕೊಲೆ
ಜನವೆರಿ 13 ರಂದು ಆರೋಪಿ ದೀಪಕ್ ಮಗಳು ಓಡಿಹೋಗಿ ಮದುವೆ ಆಗಿದ್ದಳು ಆ ಮದುವೆಯನ್ನ ಜ್ಯೋತಿಷಿಯೇ ಅನ್ಯ ಜಾತಿತವನೊಂದಿಗೆ ಮಾಡಿಸಿದ್ದಾನೆಂದು ದ್ವೇಷ. ಇದೇ ದ್ವೇಷಕ್ಕೆ ಪಕ್ಕಾ ಪ್ಲಾನ್ ಮಾಡಿ ಜ್ಯೋತಿಷಿಯ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಿ
ಮದುವೆ ಮಾಡಿಸುವದಿದೆ ಎಂದು ಬೇರೆ ನಂಬರನಿಂದ ಜ್ಯೋತಿಷಿಯನ್ನ ಮಾನಕಾಪುರಕ್ಕೆ ಕರೆಸಿದ್ದ ಆರೋಪಿ. ಸ್ಥಳಕ್ಕೆ ಬರ್ತಿದ್ದಂತೆ ಕಣ್ಣಿಗೆ ಕಾರದ ಪುಡಿ ಎರಚಿ ಬರ್ಬರ ಹತ್ಯೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಿ ಆರೋಪಿ ಬಂಧಿಸಿದ ಸದಲಗಾ ಪೊಲೀಸರು.
