ಉ.ಕ ಸುದ್ದಿಜಾಲ ಬೆಳಗಾವಿ :

ಕಬ್ಬು ಬೆಳೆಗಾರರ ಹೋರಾಟ ವಾಪಾಸ್ ಪಡೆದ ರೈತರು ಬೆಳಗಾವಿಯಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ಹೇಳಿಕೆ. ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಆರಂಭ ಆಗುತ್ತವೆ. ಯಾರು ಕೂಡ ಕಾರ್ಖಾನೆ ಆರಂಭಕ್ಕೆ ಅಡ್ಡಿ ಮಾಡಬೇಡಿ. ಗುರ್ಲಾಪುರದಲ್ಲಿ ಕೂಡ ಹೋರಾಟ ಹಿಂಪಡೆದಿದ್ದೇವೆ ಎಂದ ರೈತ ಹೋರಾಟಗಾರ ಚುನಪ್ಪ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯ ಪೊಲೀಸ್ ಕ್ವಾಟರ್ಸ್ ನ ವೀರಭದ್ರ ದೇವಸ್ಥಾನದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾಳೆ ಗುರ್ಲಾಪುರದಲ್ಲಿ ಎಲ್ಲ ರೈತರು ಸೇರಿ ಸಭೆ ಮಾಡ್ತೇವಿ. ನಾವು 3800ಕೊಡಿ ಅಂತಾ ಹೇಳಿದ್ವಿ. ಸತೀಶ್ ಜಾರಕಿಹೊಳಿ‌ ಅವರು ಮಧ್ಯಸ್ಥಿಕೆ ವಹಿಸಿ ಕಾರ್ಖಾನೆಯವರು 3600 ಕೊಡಿಸಿದ್ದಾರೆ. ದರ ನಿಗದಿ ನಮಗೆ ತೃಪ್ತಿ ತಂದಿರುವುದಾಗಿ ಹೇಳಿದ ಚೂನಪ್ಪ. ಇದೇ ಮೊದಲ ಬಾರಿಗೆ ಸಕ್ಕರೆ ಮಾರಾಟದ ಮೇಲೆಯೂ ನಮಗೆ ಲಾಂಭಾಂಶ ಬರಲಿದೆ.

ಐವತ್ತು ರೂಪಾಯಿ ಸಕ್ಕರೆ ಮಾರಾಟವಾದ್ರೇ ಅದಕ್ಕೆ ಐದನೂರು ಹೆಚ್ಚುವರಿ ಹಣ ಸಿಗಲಿದೆ. ಮುಂದೆ ಲಾಂಭಾಂಶ ಸಿಗ್ತಿರಲಿಲ್ಲ ಈಗ ಅದಕ್ಕೆ ಒಪ್ಪಿದ್ದಾರೆ. ಮೊದಲ ಹಂತದಲ್ಲಿ ನಮಗೆ ಜಯ ಸಿಕ್ಕಿದೆ. ಸರ್ಕಾರ ಒಂದು ಸಾವಿರ ಪ್ರೋತ್ಸಾಹ ಧನ ನೀಡುವವರೆಗೂ ಹೋರಾಟ ಮಾಡ್ತೇವಿ.

ಮುಖ್ಯಮಂತ್ರಿಗಳು ಒಂದು ಸಾವಿರ ಹಣ ಘೋಷಣೆ ಮಾಡಬೇಕು. ಇಲ್ಲವಾದ್ರೇ ಅಧಿವೇಶನ ಮಾಡಲು ಬಿಡುವುದಿಲ್ಲ ಎಂದ ಚೂನಪ್ಪ. ಪೊಲೀಸರ ವಶದಿಂದ ಬಿಡುಗಡೆ ಮಾಡಿದ ಬಳಿಕ ಚೂನಪ್ಪ ಪೂಜಾರಿ ಹೇಳಿಕೆ ನೀಡಿದ್ದಾರೆ.