ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯ ಡಿಸಿ ಕಚೇರಿಯಲ್ಲಿ ನಡೆಯಲಿರುವ ಮಾಲೀಕರ ಸಭೆ ಪ್ರತಿಟನ್ ಕಬ್ಬಿಗೆ 4000 ರೂ ಕೊಡುವಂತೆ ಪಟ್ಟು ಹಿಡಿದಿರುವ ರೈತರು ಪ್ರತಿಟನ್‌ಗೆ 3500 ರೂ ಮಾತ್ರ ಕೊಡುವುದಾಗಿ ಹೇಳ್ತಿರುವ ಕಾರ್ಖಾನೆ ಮಾಲೀಕರು.

ರೈತರ ಬೇಡಿಕೆಗಳನ್ನು ಮಾಲೀಕರ ಎದುರು ಹೇಳಲಿರುವ ಸಚಿವ ಸತೀಶ ಕಾರ್ಖಾನೆ ಮಾಲೀಕರ ಮನವೊಲಿಕೆಗೆ ಸತೀಶ್ ಜಾರಕಿಹೊಳಿ‌ ಕಸರತ್ತು ರೈತರು ಹಾಗೂ ಕಾರ್ಖಾನೆಯ ಕಡೆಯ ಬೇಡಿಕೆಗಳಲ್ಲಿ ವ್ಯತ್ಯಾಸವಿದ್ದು, ಒಮ್ಮತ ಮೂಡಿಸಲು ಪ್ರಯತ್ನಿಸಲಾಗುತ್ತಿದೆ.

ಇಂದು ಮತ್ತೊಮ್ಮೆ ಕಾರ್ಖಾನೆ ಮಾಲೀಕರ ಸಭೆ ನಡೆಸಲಾಗುವುದು. ದರ ನಿಗದಿ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಿರುವ ಸತೀಶ ಜಾರಕಿಹೋಳಿ.

ಸಕ್ಕರೆ ಬೆಲೆಯಲ್ಲಿ ಏರಿಳಿತವಾಗುತ್ತಿರುವುದರಿಂದ ಕಾರ್ಖಾನೆಗಳಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಕ್ಕರೆಗೆ ಎಂಎಸ್‌ಪಿ ನಿಗದಿಪಡಿಸುವಂತೆ ಸರ್ಕಾರ ಒತ್ತಾಯಿಸಿದೆ. ಎಂಎಸ್‌ಪಿ ನಿಗದಿಯಾದರೆ ಕಾರ್ಖಾನೆಗಳಿಗೆ ಭದ್ರತೆ ದೊರೆಯಲಿದೆ.

ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವಿನ ದರದ ಅಂತರವನ್ನು ಕಡಿಮೆ ಮಾಡಿ, ಇಬ್ಬರಿಗೂ ಒಪ್ಪಿಗೆಯಾಗುವ ದರ ನಿಗದಿಪಡಿಸುವುದು ಸರ್ಕಾರದ ಆದ್ಯತೆಯಾಗಿದೆ. ಇಂದು ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ.