ಉ.ಕ ಸುದ್ದಿಜಾಲ ಬೆಳಗಾವಿ :

ಕಬ್ಬಿನ ದರ ನಿಗದಿ ತೀರ್ಮಾನಕ್ಕೆ ಬರುವಲ್ಲಿ ಸಭೆ ವಿಫಲ
ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ನಾಳೆ ಸಿಎಂ ಡಿ ಕೆ ಶಿವಕುಮಾರ್ ಜೊತೆಗೆ ಚರ್ಚೆ ದರ ನಿಗದಿ ವಿಚಾರದಲ್ಲಿ ಸಿಎಂ ಜೊತೆಗೆ ಚರ್ಚಿಸಿ ತೀರ್ಮಾನ ಸಿಎಂ ಜೊತೆಗೆ ಸಭೆಯ ಬಳಿಕವೇ ದರ ಘೋಷಣೆ ಸಾಧ್ಯತೆ.

ಕಬ್ಬು ದರ ನಿಗದಿ ಸಭೆ‌ ವಿಫಲ ವಿಚಾರ ಬೆಳಗಾವಿಯಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ಪ್ರತಿಕ್ರಿಯೆ ರೈತರು ಹಾಗೂ ಕಾರ್ಖಾನೆ ಮಾಲೀಕರ ಸಭೆ ಚರ್ಚೆಗೆ ಮಾತ್ರ ಸೀಮಿತ ಚರ್ಚೆಯಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ 3500 ನೀಡೋದಾಗಿ ಹೇಳಿದ್ದಾರೆ.

ಸಕ್ಕರೆ ದರ ಮೇಲೆ ಹಣ ನೀಡುದಾಗಿ ಹೇಳುತ್ತಿದ್ದಾರೆ. ಪದೇ ಪದೇ ಅದೇ ಚರ್ಚೆ ಆಗುತ್ತಿದೆ ಡಿಸಿಯವರಿಗೆ ಎಚ್ಚರಿಕೆ ಕೊಡ್ತಿನಿ. ಹೋರಾಟ ಜನ ಆಂದೋಲನ ಆಗಿದೆ. ಚರ್ಚೆ ಮಾಡಿ ಒಂದು ದರ ಘೋಷಣೆ ಮಾಡಿ ಹೋರಾಟದ ವೇದಿಕೆಗೆ ಬಂದು ದರ ಘೋಷಣೆ ಮಾಡಿ ಎಂದ ಚೂನಪ್ಪ ಪೂಜಾರಿ.

ಕಂತಿನ ಪ್ರಕಾರ ಯಾವ ರೀತಿ ಹಣ ಕೊಡ್ತಾರಾ ಬಂದು ಹೇಳಿ
ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ಮಾಡಿ. ನಾಳೆ ಜೈಲ ಬರೋ ವೇದಿಕೆಗೆ ಬಂದು ಹೇಳಿಲಿ

ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರ ಸಭೆ ಬಳಿಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ನಿನ್ನೆ ರೈತರ ಮನವಿ ಮೇರೆಗೆ ಮತ್ತೊಮ್ಮೆ ಸಭೆ ಮಾಡಿದ್ದೇವೆ. ಸಿಎಂ ನೇತೃತ್ವದ ಸಭೆ ಆಗಿತ್ತು ಇದೀಗ ಮತ್ತೊಮ್ಮೆ ಸಭೆ ನಡೆಸಿ ರೈತರ ಸಮಸ್ಯೆ ಕೇಳಿದ್ದೇವೆ. ಅಲ್ಲಿ ಕಾರ್ಖಾನೆ ಮಾಲೀಕರು ರೈತರ ಜೊತೆಗೆ ಪ್ರತ್ಯೇಕವಾಗಿ ಸಭೆಯನ್ನೂ ಮಾಡುತ್ತೇವೆ. ನಾಳೆ ಅವಶ್ಯಕತೆ ಬಿದ್ರೆ ಮತ್ತೊಮ್ಮೆ ಕಾರ್ಖಾನೆ ಮಾಲೀಕರ ಸಭೆ ಮಾಡುತ್ತೇವೆ.

ರೈತರ ಡಿಮ್ಯಾಂಡ ಬೇರೆ, ಕಾರ್ಖಾನೆ ಡಿಮ್ಯಾಂಡ್ ಬೇರೆ ಇದೆ
ಅದಕ್ಕಾಗಿ ದರ ನಿಗದಿ ಲೇಟ್ ಆಗ್ತಿದೆ. ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ. ದರ ನಿಗದಿ ವಿಚಾರಕ್ಕೆ ಮಾತ್ರ ಸಭೆ ಮಾಡುತ್ತೇವೆ. ಕಾರ್ಖಾನೆವರು ರೈತರು ನಡುವೆ ಹೊಂದಾಣಿಕೆ ಆಗುತ್ತದೆ. ಫೈನಲ್ ಆದ್ಮೇಲೆ ರೈತರಿಗೆ ತಿಳಿಸುತ್ತೇವೆ.

ಇವತ್ತಿನ ಸಭೆ 50/50 ಆಗಿದೆ. ನಾಳೆಯವರೆಗೆ ಇತ್ಯರ್ಥ ಮಾಡುತ್ತೇವೆ. ಕಾರ್ಖಾನೆ ಮಾಲೀಕರು, ಸಚಿವರಾಗಿ ನಂದು ಜವಾಬ್ದಾರಿ ಇದೆ. ನಾಳೆ ಸಮಸ್ಯೆ ಬಗೆಹರಿಸುತ್ತೇವೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಒಂದು ಫಿಗರ್ ಇದೆ. ಅದನ್ನ ಹತ್ತಿರ ತರುವ ಪ್ರಯತ್ನ. ಎಸ್‌ಎಪಿ ಮತ್ತು ಎಂಎಸ್ಪಿ ನಾವು ನೇರವಾಗಿ ರೈತರಿಗೆ ಕೊಡುತ್ತೇವೆ.

ಈಗಿನದ್ದು ರೈತರಿಗೆ ಮಾತ್ರ ದರ ನಿಗದಿ. ಸಕ್ಕರ ದಿನವೂ ಬದಲಾವಣೆ ಆಗುತ್ತದೆ. ಇದಕ್ಕೆ ಎಂಎಸ್ಪಿ ಮಾಡಬೇಕೆಂದು ಎಂದು ನಾವು ಒತ್ತಾಯ ಮಾಡಿದ್ದೇವೆ. ಎಂಎಸ್ಪಿ ಮಾಡಿದ್ರೆ ಕಾರ್ಖಾನೆ ಮಾಲೀಕರಿಗೂ ಧೈರ್ಯ ಇರುತ್ತದೆ. ರೈತರು ಒಪ್ಪಿದ್ರೆ ಸಮಸ್ಯೆ ಬಗೆಹರಿಯುತ್ತದೆ.ಒಪ್ಪದೇ ಇದ್ರೆ ನಾವು ಸಮಸ್ಯೆ ಆಗುತ್ತದೆ ಎಂದ ಸತೀಶ ಜಾರಕಿಹೋಳಿ.